ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನದ ಕಿರು ಮೃಗಾಲಯ ಅಭಿವೃದ್ಧಿಗೆ ಎರಡು ಕೋಟಿ ರೂ. ವೆಚ್ಚದ ಕಾಮಗಾರಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಾರಕಿಹೊಳಿ, ಹಂತ ಹಂತವಾಗಿ ಐದು ವರ್ಷಗಳಲ್ಲಿ 50 ಕೋಟಿ ರೂ. ಅನುದಾನದಲ್ಲಿ ಉದ್ಯಾನವನ ಅಭಿವೃದ್ದಿ ಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹುಲಿ ಸೇರಿದಂತೆ ಪ್ರಾಣಿಗಳನ್ನು ತರಲಾಗುವುದು. ನದಿಯಿಂದ ನೇರವಾಗಿ ನೀರು ಸರಬುರಾಜು ಸೇರಿದಂತೆ ಉದ್ಯಾನವನದ ಅಭಿವೃದ್ದಿ ಕ್ರಮಕೈಗೊಳಲಾಗುವುದು ಎಂದು ತಿಳಿಸಿದರು.
ಸಂಸದ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಡೆಪ್ಯೂಟಿ ಮೇಯರ್ ಮಧುಶ್ರೀ ಪೂಜಾರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಪಾಲಿಕೆ ಎಂಜಿನಿಯರ್ ಶಶಿಧರ ನಾಡಗೌಡ, ನಗರ ಸೇವಕರಾದ ಅನುಶ್ರೀ ದೇಶಪಾಂಡೆ, ಜಯಶ್ರೀ ಮಾಳಗೆ, ಜಿಪಂ ಸದಸ್ಯ ಸಿದ್ದು ಸುಣಗಾರ, ಜೆಡಿಎಸ್ ಮುಖಂಡ ಶಿವನಗೌಡ ಪಾಟೀಲ, ಡಿಎಫ್ಒ ಅಮರನಾಥ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ