Latest
ಮತದಾನ ಜಾಗೃತಿಗೆ ಜಾಥಾ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ವಿಶ್ವೇಶ್ವರಯ್ಯ ನಗರ, ಲಕ್ಷ್ಮೀ ಕಾಂಪ್ಲೆಕ್ಸ್ ಹಾಗೂ ಎಪಿಎಂಸಿ ರಸ್ತೆಯ ಮೂಲಕ ಸಂಚರಿಸಿದ ಜಾಥಾ ಬಾಬು ಜಗಜೀವನರಾಮ್ ಉದ್ಯಾನದಲ್ಲಿ ಸಮಾರೋಪಗೊಂಡಿತು.

ಮತದಾನದ ಕುರಿತು ಜಾಗೃತಿ ಮೂಡಿಸಲು ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆಟೋ ರ್ಯಾಲಿಯನ್ನು ಸಹ ಹಮ್ಮಿಕೊಳ್ಳಲಾಗಿತ್ತು




