Latest

ಮತದಾನಕ್ಕೆ ಇನ್ನು ಎರಡೇ ದಿನ; ತಪ್ಪದೆ ಮತ ಚಲಾಯಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಮಂಗಳವಾರ ನಡೆಯಲಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದೆ.ಬಿಜೆಪಿ, ಕಾಂಗ್ರೆಸ್ ಅಲ್ಲದೆ ಸುಮಾರು 20 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಮತ್ತು ಸಾವಿರಾರು ಪಕ್ಷೇತರರು ಸಹ ಕಣದಲ್ಲಿದ್ದಾರೆ.ಮಂಡ್ಯ ಹೊರತುಪಡಿಸಿ ರಾಜ್ಯದ ಎಲ್ಲ ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ.ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಶೇ.68ರಷ್ಟು ಸರಾಸರಿ ಮತದಾನವಾಗಿದೆ. ಮಂಡ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ 81 ರಷ್ಟು ಹಾಗೂ ಬೆಂಗಳೂರಿನಲ್ಲಿ ಅತಿ ಕಡಿಮೆ ಅಂದರೆ ಶೇ.51ರಷ್ಟು ಮತ ಚಲಾವಣೆಯಾಗಿದೆ.ಸರಾಸರಿ ಮತದಾನದ ಪ್ರಮಾಣ ಹೆಚ್ಚಾಗಿದ್ದರೂ ವಿದ್ಯಾವಂತರ ಮತ್ತು ಶ್ರೀಮಂತರ ನಗರ ಬೆಂಗಳೂರಿನಲ್ಲಿ ಜನರು ಮತ ಚಲಾಯಿಸದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.ಸರಕಾರದ ಎಲ್ಲ ಸೌಲಭ್ಯ ಕೇಳುವ ಜನ ತಮ್ಮ ಕರ್ತವ್ಯ ಪಾಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಚುನಾವಣೆ ಆಯೋಗದ ಆಯೋಗ ಈ ಬಾರಿ ಮತದಾನ ಜಾಗೃತಿಗೆ ಸಾಕಷ್ಟು ಶ್ರಮ ವಹಿಸಿದೆ.ಮತದಾನ ಮಾಡಿದವರಿಗೆ ಸರಕಾರದ ಸೌಲಭ್ಯಗಳನ್ನು ನಿಲ್ಲಿಸಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button