Kannada NewsLatest

ಮತದಾರರ ಆಧಾರ್ ಸಂಖ್ಯೆ ಜೋಡಣೆ ನ.12 ರಂದು ವಿಶೇಷ ಆಂದೋಲನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ ನಿರ್ದೇಶನದಂತೆ ಮತದಾರರ ಆಧಾರ್ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡಲು ಸ್ವಯಂ ಪ್ರೇರಿತವಾಗಿ ನಮೂನೆ 6ಬಿ ಸಂಗ್ರಹಿಸಲು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ತೆಗೆದು ಹಾಕುವಿಕೆ ಮಾಡಲು ನವೆಂಬರ್ 12 ರಂದು ವಿಶೇಷ ಆಂದೋಲನ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.

ಕಾರಣ ಪ್ರಸ್ತುತವಾಗಿ ಮತದಾರರ ಪಟ್ಟಿಯಲ್ಲಿ ನಮೂದು ಇರುವ ಎಲ್ಲಾ ಮತದಾರರು ತಮ್ಮ ಆಧಾರ ಸಂಖ್ಯೆಗಳನ್ನು ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿ/ಮತದಾರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆ 6ಬಿ ದಲ್ಲಿ ಅರ್ಜಿ ಸಲ್ಲಿಸುವುದು ಅಥವಾ ಆನ್ಲೈನ್ ಮೂಲಕ ಎನ್.ವಿ.ಎಸ್.ಪಿ/ವಿ.ಎಚ್ಎ ಆಪ್ ಮೂಲಕ ತಮ್ಮ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡಿಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಆಧಾರ್ ಕಾರ್ಡ್ ಇಲ್ಲದೆ ಇರುವ ಮತದಾರರು ಈ ಕೆಳಗಿನ ದಾಖಲೆಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

1) MNRGEA job card
2) Passbook with photograph issue by bank/post office
3) Health insurance smart Card issued under the scheme of ministry of labour
4) Driving licence
5) PAN card
6) Smart Card issued by RGI under NPR.
7) Indian Passport
8) Pension document with photograph
9) Service identity card with photograph issued to employees by Central/state PCUs/public limited companies
10) Official identity card issued to MP MLA/MLCs
11) Unique Identity ID (UDID) card issued by M/o Social justice and Empowerment gol

ಸದರಿ ವಿಶೇಷ ಆಂದೋಲನದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ತೆಗೆದು ಹಾಕುವಿಕೆ ಮಾಡುವ ಕುರಿತು ಸೌಲಭ್ಯವನ್ನು ಕಲ್ಪಿಸಿದೆ. ಆದ್ದರಿಂದ ನವೆಂಬರ್ 12 ರಂದು ನಡೆಯಲಿರುವ ವಿಶೇಷ ಆಂದೋಲನದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.

PSI ನೇಮಕಾತಿ ಹಗರಣದ ಪ್ರಮುಖ ಆರೋಪಿಗಳಿಗೆ ED ಬಿಗ್ ಶಾಕ್

https://pragati.taskdun.com/latest/psi-scamed-raidamrith-poulshantakumarhouse/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button