Latest

ಮರಗಳ ಸ್ಥಳಾಂತರ: ಬೆಳಗಾವಿಯಲ್ಲಿ ಹೊಸ ಪ್ರಯೋಗ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಸ್ತೆ ಅಗಲೀಕರಣದ ವೇಳೆ ತೆರವುಗೊಳಿಸಬೇಕಾದ ಮರಗಳನ್ನು ಬೇರು ಸಮೇತ ಕಿತ್ತು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನವೊಂದು ಬೆಳಗಾವಿಯಲ್ಲಿ ನಡೆಯುತ್ತಿದೆ. 

ಇಲ್ಲಿಯ ಬಾಕ್ಸೈಟ್ ರಸ್ತೆ -ಟಿವಿ ಸೆಂಟರ್  ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. 1.5 ಕಿಮೀ ಉದ್ದದ ರಸ್ತೆಯಲ್ಲಿ ಸುಮಾರು 230 ಗಿಡ, ಮರಗಳಿವೆ. ಅವುಗಳನ್ನು ಕಡಿಯದೆ, ಕಿತ್ತು ಬೇರೆಡೆಗೆ ಸ್ಥಳಾಂತರಿಸಿ ನೆಡಬೇಕೆನ್ನುವ ಸ್ಥಳೀಯರ ಸಲಹೆಯಂತೆ ಲೋಕೋಪಯೋಗಿ ಇಲಾಖೆ ಸ್ಥಳಾಂತರ ಪ್ರಕ್ರಿಯೆ ಶುರು ಮಾಡಿದೆ. 

ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರ ನೆರವಿನಿಂದ ಮೊದಲ ಹಂತದಲ್ಲಿ 34 ಮರಗಳನ್ನು ಸ್ಥಳಾಂತರಿಸಿ ಪಿರನವಾಡಿಯ ಹೊಸ ಕೆರೆಯ ಬಳಿ ಮತ್ತು ಅಲ್ಲಿನ ರಸ್ತೆ ಪಕ್ಕದಲ್ಲಿ ನೆಡಲಾಗುತ್ತಿದೆ. 

ಈ ಪ್ರಯೋಗ ಯಶಸ್ವಿಯಾದರೆ ಒಂದಿಷ್ಟು ಮರಗಳನ್ನು ಉಳಿಸಿಕೊಳ್ಳಬಹುದು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button