ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇತಿಹಾಸ ತೆಗೆದು ನೋಡಿದರೆ ಯಾರು ಯಾರನ್ನ ಹಾಳು ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಸಮ್ಮಿಶ್ರ ಸರಕಾರದಲ್ಲಿ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅವರು ಸರಿಯಾಗಿ ಕೆಲಸ ಮಾಡಲಿಲ್ಲ. ರಮೇಶಗೆ ಏನು ಕಿರೀಟ ನೀಡಬೇಕಿತ್ತಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಗೋಕಾಕ ತಾಲೂಕಿನ ಮಲಾಮರಡಿ, ಗುಜನಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರಕಾರದಲ್ಲಿ ರಮೇಶಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕಾಂಗ್ರೆಸ್‍ನಲ್ಲಿದ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದರು. ಸಚಿವರಿದ್ದಾಗಲೇ ರಮೇಶ ಪಕ್ಷ ವಿರೋಧಿ ಕೆಲಸ ಮಾಡಿದರು. ಸಚಿವ ಸ್ಥಾನಕ್ಕಿಂತ ಅವರಿಗೆ ಕಿರೀಟ ಕೊಡೋಕೆ ಆಗುವುದಿಲ್ಲ. ಇದನ್ನೆ ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವುದು ಎನ್ನುವುದು ಎಂದು ರಮೇಶ ವಿರುದ್ದ ಕಿಡಿಕಾರಿದರು.
ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವ ಕುರಿತು ಬೇಗ ನಿರ್ಣಯ ತೆಗೆದುಕೊಳ್ಳಲಿ ಎಂದರು.
ಗೋಕಾಕನಲ್ಲಿ ಲಖನ್ ಸ್ಪರ್ಧೆಯ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ. ನನ್ನ ವಿರುದ್ದ ಯಾರೇ ಸ್ಪರ್ಧೆ ಮಾಡಿದರೂ ಸ್ವಾಗತ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ