Latest

ರೈಲ್ವೆ ಹಳಿ ಮೇಲೆ ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 
ಟಿಲಕವಾಡಿ ಮೊದಲ ರೈಲ್ವೆ ಗೇಟ್ ಬಳಿ ಸಾವನ್ನಪ್ಪಿದ ವ್ಯಕ್ತಿ ಬೈಲಹೊಂಗಲ ತಾಲೂಕಿನ ಉಡಕೇರಿಯ ಚೆನ್ನಬಸಪ್ಪ ಸಿದ್ದು ಕೊಟಗಿ (40) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಈ ಘಟನೆ ನಡೆದಿದೆ. ಸದ್ಯ ಪತ್ನಿ ಮಕ್ಕಳ ಜತೆ ಭವಾನಿನಗರದಲ್ಲಿ ವಾಸವಿರುವ ಇವರು ಮಜಗಾಂವಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 
ಗುರುವಾರ ಸಂಜೆ ಕೆಲಸ ಮುಗಿಸಿ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ರೈಲು ಬಂದ ಕಾರಣ ಅವರು ಹಳಿಯ ಮೇಲೆ ಬಿದ್ದು ಅವರ ಮೇಲೆ ರೈಲು ಗಾಲಿ ಹರಿದು ಹೋಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಿಂದ ಮೃತದೇಹ ಸಂಪೂರ್ಣ ಛಿದ್ರಛಿದ್ರವಾಗಿದ್ದು, ಗುರುತು ಹಿಡಿಯಲು ಸಾಧ್ಯವಾಗದಷ್ಟು ನುಜ್ಜುಗುಜ್ಜಾಗಿದೆ.
ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button