Latest

ವಿಸ್ಮಯಕಾರಿಯೋ  ವಿಚಿತ್ರವೋ, ಹೂಡಿಕೆ ಸುರಕ್ಷತೆಗೆ ಇರಲಿ ಆದ್ಯತೆ

  ಕೆ ಜಿ ಕೃಪಾಲ್
ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು  ಕಳೆದ ಒಂದು ವರ್ಷದಲ್ಲಿ ರೂ.7 ಲಕ್ಷಕ್ಕೂ ಹೆಚ್ಚಿನ ಗಾತ್ರದಷ್ಟು ಕರಗಿದೆ ಎಂಬ ವಿಚಾರವು ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.  ಸುಮಾರು ರೂ.144 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯದಲ್ಲಿ 7 ಲಕ್ಷ ಕೋಟಿಯಷ್ಟು ಕರಗಿರುವುದು ಹೆಚ್ಚೇನಲ್ಲ.  ಆಂತರಿಕವಾಗಿ ಈ ವರ್ಷ ಕೆಲವು ಕಂಪನಿಗಳ ಬೆಲೆಗಳು ಕರಗಿ ನೀರಾಗಿ ಹೂಡಿಕೆದಾರರನ್ನು ಬರಡಾಗಿಸಿರುವುದು ಆತಂಕಕಾರಿಯಾಗಿದೆ.  ಕೆಲವು ಕಂಪನಿಗಳ ಷೇರಿನ ಮೌಲ್ಯವು ಕುಸಿದಿರುವುದನ್ನು ಗಮನಿಸಿದಾಗ ರೂ.7 ಲಕ್ಷ ಬಂಡವಾಳೀಕರಣ ಮೌಲ್ಯ ಕರಗಿರುವುದು ನಗಣ್ಯವೆನಿಸುತ್ತದೆ.
* ವಕ್ರಾಂಗಿ ಲಿಮಿಟೆಡ್ ಕಂಪನಿ ಷೇರಿನ ಬೆಲೆ  2018 ರ ಆರಂಭದಲ್ಲಿ ರೂ.500 ಕ್ಕೂ ಹೆಚ್ಚಿದ್ದು ನವೆಂಬರ್ ತಿಂಗಳಲ್ಲಿ ರೂ.22 ಕ್ಕೆ ಕುಸಿದಿದ್ದು ವರ್ಷಾಂತ್ಯದಲ್ಲಿ ರೂ.33 ರ ಸಮೀಪವಿದೆ.
* ಬಾಂಬೆ ರೇಯಾನ್ ಕಾರ್ಪೊರೇಷನ್ ಜನವರಿ 2018 ರಲ್ಲಿ ರೂ.125 ರ ಸಮೀಪವಿದ್ದು ಡಿಸೆಂಬರ್ ಅಂತ್ಯದಲ್ಲಿ ರೂ.8 ರ ಸಮೀಪಕ್ಕೆ ಕುಸಿದಿದೆ.
* ಮನ್ ಪಸಂದ್ ಬೆವೆರೇಜಸ್  ಕಂಪನಿ ಷೇರಿನ ಬೆಲೆ ಜನವರಿಯ ಆರಂಭಿಕ ವಾರದಲ್ಲಿ ರೂ.498 ರ ಸಮೀಪವಿದ್ದು ಅಕ್ಟೊಬರ್ ತಿಂಗಳಲ್ಲಿ ರೂ.79 ರ ಸಮೀಪವಿದ್ದು, ರೂ.88 ರ ಸಮೀಪ ವರ್ಷಾಂತ್ಯ ಕಂಡಿದೆ.
*  ದಿವಾನ್ ಹೌಸಿಂಗ್ ಫೈನಾನ್ಸ್  ಕಾರ್ಪೊರೇಷನ್ ಷೇರಿನ ಬೆಲೆ  ಸೆಪ್ಟೆಂಬರ್ ನಲ್ಲಿ ರೂ.690 ರಲ್ಲಿದ್ದು  ಅಕ್ಟೊಬರ್ ತಿಂಗಳಲ್ಲಿ ರೂ.177 ರ ಸಮೀಪಕ್ಕೆ ಕುಸಿದಿದೆ. ರೂ.249 ರ ಸಮೀಪ ವರ್ಷಾಂತ್ಯ ಕಂಡಿದೆ.
* ಇಂಫೀಬೀಮ್  ಕಂಪನಿ ಷೇರಿನ ಬೆಲೆ ಸೆಪ್ಟೆಂಬರ್ ನಲ್ಲಿ  ರೂ.242 ರಲ್ಲಿದ್ದು ಅಕ್ಟೊಬರ್ ಅಂತ್ಯದಲ್ಲಿ ರೂ.28 ರ ಸಮೀಪಕ್ಕೆ ಕುಸಿದಿದೆ. ರೂ.47 ರ ಸಮೀಪ ವರ್ಷಾಂತ್ಯ ಕಂಡಿದೆ.
 ಇವುಗಳಲ್ಲದೆ ಕಂಪನಿಗಳಾದ ರೋಲ್ಟ ಇಂಡಿಯಾ ರೂ.82 ರಿಂದ ರೂ.೮ ರವರೆಗೂ,  ಪೂಂಜ್ ಲಾಯ್ಡ್ ರೂ.29 ರಿಂದ ರೂ.3.50ಗೆ ,  ಪಿ ಸಿ ಜ್ಯುವೆಲ್ಲರ್ ರೂ.600 ರ ಸಮೀಪದಿಂದ ರೂ.47 ರವರೆಗೂ,  ಗೀತಾಂಜಲಿ ಜೇಮ್ಸ್ ರೂ.83 ರ ಸಮೀಪದಿಂದ ರೂ.1 ಕ್ಕೆ,  ಕ್ವಾಲಿಟಿ ಲಿಮಿಟೆಡ್ ರೂ.119 ರ ಸಮೀಪದಿಂದ  ರೂ.6 ರವರೆಗೂ  ಕುಸಿದಿವೆ.
ಈ ರೀತಿಯ ಅಸಹಜ ಇಳಿಕೆಯಲ್ಲದೆ  ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್,  ಬಲರಾಂಪುರ್ ಚಿನ್ನಿ,  ಬಿ ಇ ಎಲ್, ರೂರಲ್ ಎಲೆಕ್ಟ್ರಿಫಿಕೇಷನ್  ಕಾರ್ಪೊರೇಷನ್,  ಯಸ್ ಬ್ಯಾಂಕ್, ಕಮ್ಮಿನ್ಸ್ ಇಂಡಿಯಾ, ಮಾರುತಿ ಸುಜುಕಿ, ಕೋಟಕ್ ಮಹಿಂದ್ರಾ  ಬ್ಯಾಂಕ್,  ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ,  ಇನ್ಫೋಸಿಸ್, ಸಿಪ್ಲಾ, ಅಲೆಂಬಿಕ್ ಫಾರ್ಮ,  ಇಂಡಸ್ ಇಂಡ್ ಬ್ಯಾಂಕ್,  ಬಯೋಕಾನ್ ನಂತಹ ಅಗ್ರಮಾನ್ಯ ಕಂಪನಿಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಅವಕಾಶಗಳನ್ನು ಒದಗಿಸಿವೆ.
ಕೇವಲ ಬೆಳಕಿಗೆ ಬರುವ ಅಂಶಗಳನ್ನಾಧರಿಸಿ  ಹೂಡಿಕೆ ಬಗ್ಗೆ ನಿರ್ಧರಿಸುವ ಬದಲು  ವಾಲ್ಯೂ ಪಿಕ್ ಅವಕಾಶಗಳನ್ನು ರಿಯಲ್ ಟೈಮ್ ಆಧಾರದ ಮೇಲೆ ನಿರ್ಧರಿಸುವುದು ಅಲ್ಪಮಟ್ಟಿನ ಸುರಕ್ಷಿತ ಶೈಲಿ ಈಗಿನ ಅಗತ್ಯವಾಗಿದೆ.
(ಲೇಖಕರು ಆರ್ಥಿಕ ಅಂಕಣಕಾರರು, ಮೊ: 9886313380)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button