Latest

ಶಿರಸಿಯ ವೆಂಕಟರಮಣ ಹೆಗಡೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಜರಗುವ ಜಗದ್ಗುರು ರೇಣುಕಾಚಾರ್ಯ ಜಯಂತಿಯ ನಿಮಿತ್ಯ ಕೊಡಮಾಡುವ “ಶ್ರೀ ಜಗದ್ಗುರು ರೇಣುಕಾಚಾರ್ಯ ಸದ್ಭಾವನ ಪ್ರಶಸ್ತಿ” ಗೆ ಶಿರಸಿಯ ನಿಸರ್ಗಮನೆಯ ಡಾ. ವೆಂಕಟರಮಣ ಹೆಗಡೆ ಆಯ್ಕೆಯಾಗಿದ್ದಾರೆ.

ಇದೇ 19ರಂದು ಶಿರಸಿಯ ನಿಸರ್ಗ ಮನೆಯಲ್ಲಿ ಸಂಜೆ 6  ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Home add -Advt

ಈ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೊಟ್ಟೂರು ಜಾನುಕೋಟಿ ಮಠದ ಷ ಬ್ರ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಭೂತಿಪುರ ಮಹಾಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಡಾ. ವೆಂಕಟರಮಣ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಗದ್ಗುರು ರೇಣುಕಾಚಾರ್ಯರನ್ನು ಕುರಿತು ಮಾನಸಾ ಹೆಗಡೆ ಅವರು ಸಂಗೀತ ಸೇವೆಯನ್ನು ನೀಡಲಿದ್ದಾರೆ.

 ಲಕ್ಷಾಂತರ ಜನರಿಗೆ ಮನೆಯಲ್ಲಿಯೇ ರೋಗ ನಿರ್ಮೂಲನ ಮಾಡಲು ಸಹಾಯ ಮಾಡಿದ ಏಳು ಆರೋಗ್ಯ ಪುಸ್ತಕಗಳನ್ನು ಬರೆದು, ಎರಡು ಸಾವಿರಕ್ಕೂ ಹೆಚ್ಚು ಅಧಿಕ ಲೇಖನಗಳನ್ನು ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಔಷಧವಿಲ್ಲದೆ ಕೇವಲ ಆಹಾರದ ಮೂಲಕ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮಾರ್ಗದರ್ಶನ ಮಾಡುತ್ತಿರುವ ಡಾ. ವೆಂಕಟ್ರಮಣ ಹೆಗಡೆ ಅವರು ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ.

 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಮತ್ತು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button