Latest

ಸಿಇಟಿಯಲ್ಲಿ ಬೆಳಗಾವಿ ಮಹೇಶ್ ಪಿಯು ಕಾಲೇಜಿಗೆ ಹಲವು ರ‍್ಯಾಂಕ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇತ್ತೀಚಿಗೆ ನಡೆದ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಸ್ಥಳೀಯ ಎಸ್ ಜಿ ವಿ ಮಹೇಶ ಪಿಯು ಕಾಲೇಜಿ ಕಾಲೇಜಿಗೆ ಹಲವು ರ‍್ಯಾಂಕ್ ಬಂದಿದೆ.

ರಾಜ್ಯಮಟ್ಟದಲ್ಲಿ ಇಂಜಿನಿಯರಿಂಗ್ ನಲ್ಲಿ ಸೌರಭ ಕಮತೆ ೬೦೯ನೇ ರ‍್ಯಾಂಕ್ ಮತ್ತು  ಅಲಿ ಧರವಾಜಕರ ೮೩೭ ನೇ ರ‍್ಯಾಂಕ್ ಪಡೆದಿದ್ದಾರೆ. ಅಹೀಶ ಹೆಗಡೆ, ಆದರ್ಶ ಪಾಗಡ, ಓಂಕಾರ ಕಾಮತ್, ಸ್ತುತಿ ಶೇತ್ವಾಲ್, ಅನಿಲ ವನ್ನುರ ಸಹ ಉತ್ತಮ ರ‍್ಯಾಂಕ್ ಪಡೆದಿದ್ದಾರೆ.

ಅಲಿ ದರವಾಜಕರ ಬಿಎನ್ವಾಯ್ ಎಸ್ ನಲ್ಲಿ ೧೪೧ ನೇ ರ‍್ಯಾಂಕ್, ಬಿ ಎಸ್ಸಿ ಅಗ್ರಿ ಯಲ್ಲಿ ೧೭೨ನೇ ರ‍್ಯಾಂಕ್, ವೆಟರನರಿಯಲ್ಲಿ ೧೭೬ ನೇ ರ‍್ಯಾಂಕ್ ಹಾಗೂ ಪಾರ್ಮಾದಲ್ಲಿ ೩೨೧ನೇ ರ‍್ಯಾಂಕ್ ಗಳಿಸಿದ್ದಾನೆ.

ಸಾಧನೆಗೈದ ವಿದ್ಯಾರ್ಥಿಗಳನ್ನು  ಮಹೇಶ ಪಿಯು ಕಾಲೇಜಿನ ಉತ್ತರಕರ್ನಾಟಕ ವಿಭಾಗೀಯ ಮುಖ್ಯಸ್ಥ ವಿನೋದಕುಮಾರ , ಪ್ರಾಚಾರ್ಯ  ಎಂ ವಿ ಭಟ್ಟ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ಆಡಳಿತ ಮಂಡಳಿ  ಅಭಿನಂದಿಸಿದೆ.

ಜೆಇಇಯಲ್ಲಿ ಮಹೇಶ ಕಾಲೇಜಿನ ಸಾಧನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button