Latest

ಸೋಮವಾರ ಅವರೊಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆ

 

 

 

   ಪ್ರಗತಿವಾಹಿನಿ ಸುದ್ದಿ, ಬೆಳ ಗಾವಿ

ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವು ನಿರ್ಮಿಸಿರುವ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಶ್ರೀ ಚನ್ನಬಸವ ದೇವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ನೂತನ ಕಟ್ಟಡ ಉದ್ಘಾಟಿಸುವರು. ಅವರೊಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ನಾಗನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ಸ್ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಪ್ರಮೋದ ಕೊಚೇರಿ, ಸಂಜಯ ಕುಬಲ, ಜಿಪಂ ಸದಸ್ಯ ಜಿತೇಂದ್ರ ಮಾದರ, ನಂದಗಡ ಟಿಎಪಿಸಿಎಂಎನ್ ಅಧ್ಯಕ್ಷ ಗೋಪಾಲ ಪಾಟೀಲ, ಖಾನಾಪುರ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶೋಕ ಪಾಟೀಲ, ತಾಪಂ ಸದಸ್ಯೆ ಭಾರತಿ ಬಂಬಾಡಿ, ನಂದಗಡ ಎಪಿಎಂಸಿ ನಿರ್ದೇಶಕ ಹನಮಂತ ಪಾಟೀಲ, ಹಾಲು ಒಕ್ಕೂಟದ ನಿರ್ದೇಶಕರಾದ ಸಂತೋಷ ಪಾಟೀಲ, ಕಲ್ಲಪ್ಪ ಗಿರೇಣ್ಣವರ, ವ್ಯವಸ್ಥಾಪಕ ಡಾ. ಜಿ.ಆರ್. ಮನೇರಿ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಮಾರಂಭದಲ್ಲಿ ಬೆಳಗಾವಿ ಹಾಲು ಒಕ್ಕೂಟದ ಸಹ ವ್ಯವಸ್ಥಾಪಕ ಎಂ.ಕೆ. ಮುತ್ತಪ್ಪ, ಹಾಲು ವಿಸ್ತರಣಾಧಿಕಾರಿ ತ್ರಿವೇಣಿ ಮುಕ್ಕಣ್ಣವರ, ಸಹಾಯಕ ವ್ಯವಸ್ಥಾಪಕ ಡಾ. ರಾಕೇಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣ ರಾ. ಕೊಡೊಳ್ಳಿ, ಈರಪ್ಪ ನಾಗಣ್ಣವರ, ಕಲ್ಲಪ್ಪ ಮ. ಕೊಡೊಳ್ಳಿ, ಶಿವಯ್ಯ ಚಿಕ್ಕಮಠ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಫಕೀರ ಪೇಜೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button