ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಎಲ್ಲರೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳು ಮನುಷ್ಯನ ಆರೋಗ್ಯ ಉತ್ತಮಗೊಳಿಸುವುದಲ್ಲದೆ, ಉಲ್ಲಾಸ, ಉತ್ಸಾಹ ಹೊಂದಲು ಸಹಕಾರಿಯಾಗುತ್ತವೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಮುಖ್ಯ ಅತಿಥಿಗಳಾಗಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಎಂಬಿಎ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಇನಾಮದಾರ ಮತ್ತು ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಎಸ್. ಪಾಟೀಲ ಕ್ರೀಡಾ ಧ್ವಜವಂದನೆ ನೆರವೇರಿಸಿದರು.
ಕ್ರೀಡಾ ಕಾರ್ಯದರ್ಶಿ ಮುಸ್ತಾಕ್ ಗೋರೆನಾಯಿಕ, ಅರವಿಂದ ಪ್ರಧಾನಿ, ಸುಶಿಲಕುಮಾರ ಹಂಚಿನಾಳ, ನಂಕ್ಯಾಂತಿವ್ ಪಿರ್ತೊ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಿಮ್‌ಖಾನಾ ಅಧ್ಯಕ್ಷ ಪ್ರೊ. ಕಿರಣ ಪೋತದಾರ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ಇಪ್ಪತ್ತಕ್ಕೂ ಹೆಚ್ಚು ವಿವಿಧ ಪಂದ್ಯಗಳಲ್ಲಿ ಸುಮಾರು ೪೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೊ. ಅಮರ ಬ್ಯಾಕೋಡಿ, ಪ್ರೊ. ಸದಾನಂದ ದೊಡಮನಿ, ಡಾ. ಬಿ.ಟಿ. ಸುರೇಶ ಬಾಬು, ಪ್ರೊ. ಅನಿಲಕುಮಾರ ಕೋರಿಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ದಮೋಣೆ, ಪ್ರೊ. ವಿನಾಯಕ ಜೋಶಿ, ಎಂ.ಎನ್. ಹಂಪಿಹೊಳಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ