Latest

ಆರೋಗ್ಯ ಕೇಂದ್ರದ ವಾತಾವರಣ ಕಲುಷಿತಗೊಳಿಸಬೇಡಿ

ಪ್ರಗತಿವಾಹಿನಿ ಸುದ್ದಿ, ದೊಡವಾಡ

ಗ್ರಾಮದ ಶಾಂತಿ ನಗರದಲ್ಲಿನ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ೨೦೧೮-೧೯ನೇ ಸಾಲಿನ ಆರೋಗ್ಯ ಸುರಕ್ಷಾ ಸಮಿತಿಯ ತ್ರೈವಾರ್ಷಿಕ ಸಭೆ ಜರುಗಿತು. ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹಾಲಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಈರಪ್ಪ ಹತ್ತಿಕಟಗಿ, ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುತ್ತ ಕಸ-ಕಡ್ಡಿ, ಮನೆ ಬಳಕೆ ನೀರು ಚೆಲ್ಲಿ  ವಾತಾವರಣವನ್ನು ಕಲುಷಿತಗೊಳಿಸಬಾರದು. ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಉತ್ತಮ ರೀತಿಯಲ್ಲಿ  ಸ್ಪಂದಿಸಬೇಕು. ಆರೋಗ್ಯ ಕೇಂದ್ರಗಳಿಗೆ ಬಿಡುಗಡೆಯಾಗುವ ಸರಕಾರದ ಅನುದಾನದ ಸದ್ಬಳಕೆ ಬಗ್ಗೆ ಸಮಿತಿಯವರಿಗೆ ಕಾಲ ಕಾಲಕ್ಕೆ  ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ. ಕೆ. ಮಹೇಶ್ವರಿ ಬಿಡುಗಡೆಯಾದ ಅನುದಾನ, ಖರ್ಚು-ವೆಚ್ಚ ಹಾಗೂ ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕೇಂದ್ರದ ಆವರಣ ಗೋಡೆ  ಹಾಗೂ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಬಸವಂತ ಜಮನೂರ, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾದ ಬಾಳಪ್ಪ ಅಲಸಂಧಿ, ಮಹಾದೇವ ಹೂಗಾರ, ಶಿವಶಂಕರ ಅರಳಿಮರದ ಗಿರಿಮಲ್ಲಪ್ಪ ಬೆಳವಡಿ ಉಪಸ್ಥಿತರಿದ್ದರು. ಡಿ.ಎಸ್.  ಝಂಡೇಕರ ನಿರೂಪಿಸಿ ವಂದಿಸಿದರು.

Home add -Advt

 

 

Related Articles

Back to top button