Latest

ಇದು ಮಧ್ಯಂತರ ಬಜೆಟ್ ಅಲ್ಲ, ವಿಕಾಸದತ್ತ ಕೊಂಡೊಯ್ಯುವ ಬಜೆಟ್ -ಪಿಯೂಷ್

   ಪ್ರಗತಿವಾಹಿನಿ ಸುದ್ದಿ, ನವದೆಹಲಿ
 ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರಿಗೆ ಹಲವು ಕೊಡುಗೆಗಳನ್ನು ನೀಡಿದೆ. ಬಜೆಟ್ ಮಂಡಿಸಿದ ಹಣಕಾಸು ಸಚಿವ ಪಿಯೂಷ್ ಗೋಯಲ್, ಇದು ಮಧ್ಯಂತರ ಬಜೆಟ್ ಅಲ್ಲ, ವಿಕಾಸದತ್ತ ಕೊಂಡೊಯ್ಯುವ ಬಜೆಟ್ ಎಂದು ಬಮ್ಣಿಸಿದರು. ಬಜೆಟ್ ನ ಪ್ರಮುಖ ಅಂಶಗಳು ಹೀಗಿವೆ…
* ಆದಾಯ ತೆರಿಗೆ ಮಿತಿ 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ. 
* ರೈತರ ಆದಾಯ ಉತ್ತೇಜನಕ್ಕಾಗಿ ರೈತರ ಖಾತೆಗೆ 6 ಸಾವಿರ ರೂಪಾಯಿ ಸಹಾಯ ಧನ ಘೋಷಿಸಲಾಗಿದ್ದು, ಇದು 2018ರ ಡಿಸೆಂಬರ್ ನಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಇದು ಕೊಡುಗೆಯಾಗಿದೆ‌. ಒಟ್ಟು 3 ಕಂತುಗಳಲ್ಲಿ 6 ಸಾವಿರ ರೂಪಾಯಿ ನೀಡಲಾಗುತ್ತದೆ. ಇದು 12 ಕೋಟಿ ರೈತ ಕುಟುಂಬಗಳಿಗೆ ಉಪಯೋಗವಾಗಲಿದೆ. ಕಿಸಾನ್ ಸಮ್ಮಾನ್ ಎಂಬ ಈ ಯೋಜನೆಗೆ 75 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.
* ಗೋವುಗಳ ಸಂರಕ್ಷಣೆಗಾಗಿ ಬಜೆಟ್​ನಲ್ಲಿ ಹೊಸ ಅನುದಾನ. ಮೀನುಗಾರಿಕೆಗಾಗಿ ಹೊಸ ಸಚಿವಾಲಯ. ಪಶುಸಂಗೋಪನೆ ಹಾಗೂ ಮೀನುಗಾರಿಕೆಗಾಗಿ ಕೃಷಿಕರಿಗೆ ಸಾಲ ನೀಡಲಾಗುತ್ತದೆ.
* ಪ್ರಾಕೃತಿಕ ವಿಕೋಪದಿಂದ ಬೆಳೆಹಾನಿ ಮಾಡಿಕೊಂಡಿರುವ ರೈತರಿಗೆ ಬಡ್ಡಿ ವಿನಾಯಿತಿ. ಸಣ್ಣ ಕೈಗಾರಿಕೆಗಳಿಗೆ ಶೇಕಡಾ 2 ರಷ್ಟು ಬಡ್ಡಿ ವಿನಾಯ್ತಿ. ರೈತರ ಸಾಲದ ಮೇಲೆ 2 ರಿಂದ 3 ಶೇಕಡಾ ವರೆಗೆ ಬಡ್ಡಿ ವಿನಾಯಿತಿ. ಸರ್ಕಾರಿ ಬ್ಯಾಂಕುಗಳ ಪುನಶ್ಚೇತನಕ್ಕೆ 2.6 ಸಾವಿರ ಕೋಟಿ ರೂ. ಘೋಷಣೆ.
* ಕಾರ್ಮಿಕರ ಆದಾಯ ಮಿತಿ 21 ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಕಾರ್ಮಿಕರ ಬೋನಸ್ 7 ಸಾವಿರ ರೂಪಾಯಿ ಏರಿಕೆ ಮಾಡಲಾಗಿದೆ.
* ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಲಾಗಿದ್ದು, ರಕ್ಷಣಾ ವ್ಯವಸ್ಥಗೆ 3 ಲಕ್ಷ ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ.
* ಇಎಸ್ ಐ ಅರ್ಹತಾ ಮಿತಿ 15 ಸಾವಿರದಿಂದ 21 ಸಾವಿರ ರೂಗಳಿಗೆ ಏರಿಕೆ ಮಾಡಲಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಕ್ರಮದ ಸಲುವಾಗಿ ಕಾರ್ಮಿಕರಿಗೆ ಪಿಂಚಣೆ ಯೋಜನೆ ಜಾರಿ ಮಾಡಲಾಗಿದ್ದು, 60 ವರ್ಷಗಳ ನಂತರ ಪ್ರತೀ ತಿಂಗಳು ಅವರಿಗೆ 3 ಸಾವಿರ ರೂಪಾಯಿ ಪಿಂಚಣಿ ಲಭ್ಯವಾಗಲಿದೆ.
* ರೈಲ್ವೇ ಅಭಿವೃದ್ಧಿಗೆ 1 ಲಕ್ಷ 58 ಸಾವಿರ ಕೋಟಿ ರೂ ವಿನಿಯೋಗ. ರಾಷ್ಟ್ರೀಯ ಗೋಕುಲ ಮಿಷನ್ ಅನುದಾನ 750 ಕೋಟಿ ರೂಪಾಯಿಗೆ ಹೆಚ್ಚಳ. ಯುವಕರ ಉದ್ಯೋಗ ಸೃಷ್ಟಿಗೆ ಯೋಜನೆ ಘೋಷಿಸಲಾಗಿದ್ದು, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿಗೆ ನಿರ್ಧಾರ. 1 ಕೋಟಿ‌ ಯುವಕರಿಗೆ ತರಬೇತಿ ನೀಡಲು ಹೊಸ ಯೋಜನೆ ಘೋಷಣೆ.
* ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದ್ದು, ತೆರಿಗೆ ಸಂಗ್ರಹದಲ್ಲಿ ಶೇ.80 ರಷ್ಟು ಹೆಚ್ಚಳವಾಗಿದೆ.  ಆದಾಯ ತೆರಿಗೆ 12 ಲಕ್ಷ ಕೋಟಿ ರೂ ಪಾವತಿಯಾಗಿದ್ದು, ಶೇಕಡಾ 99.94 ರಷ್ಟು ಆದಾಯ ತೆರಿಗೆ ಪಾವತಿಯಾಗಿದೆ ಹಾಗು ತೆರಿಗೆ ಪಾವತಿಸಲು ಆನ್ ಲೈನ್ ಅವಕಾಶ ಕಲ್ಪಿಸಲಾಗಿದೆ‌.
* ರಾಷ್ಟ್ರೀಯ ಶಿಕ್ಷಣ ಮಿಷನ್​ಗೆ 38,578 ಕೋಟಿ ಅನುದಾನ.
* ಭಾರತೀಯ ಚಿತ್ರರಂಗಕ್ಕೆ ಬಂಪರ್ ಕೊಡುಗೆ ಘೋಷಣೆ ಮಾಡಲಾಗಿದ್ದು, ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಘೋಷಿಸಲಾಗಿದೆ. ಎಲ್ಲಾ ಭಾಷೆಯ ಸಿಮಿಮಾಗಳಿಗೂ ಅನುಮತಿ ನೀಡಲಾಗಿದ್ದು, ಶೂಟಿಂಗ್ ಗೆ ಶೀಘ್ರ ಅನುಮತಿ ನೀಡಲು ವ್ಯವಸ್ಥೆ ಮಾಡಲಾಗುವುದು‌.
* ಒಂದೇ ಭಾರತ ಎಕ್ಸ್ ಪ್ರೆಸ್ ರೈಲ್ವೆ ಸರ್ವಿಸ್ ಯೋಜನೆ ಆರಂಭಗೊಳಿಸಲಾಗುವುದು, ಉಡಾನ್ ಯೋಜನೆಯನ್ನು ಮಾಧ್ಯಮ ಹಂತದ ನಗರಗಳಿಗೂ ವಿಸ್ತರಿಸಲಾಗುವುದು, ಕೋಲ್ಕತ್ತಾದಿಂದ ವಾರಣಾಸಿಗೆ ಜಲಸಾರಿಗೆ ಯೋಜನೆಯನ್ನು ಜಾರಿಗೆ ತರಲಾಗುವುದು.
* ಗರ್ಭಿಣಿಯವರಿಗೆ ರಜೆಯ ಜೊತೆಜೊತೆಗೆ ಸಹಾಯಧನ ಘೋಷಣೆ. 5 ಸಾವಿರ ರುಪಾಯಿ ವೇತನ ಪಡೆಯುವ ಸಂಘಟಿತವಲಯದ ಕಾರ್ಮಿಕರಿಗೆ ಪಿಂಚಣೆ ಘೋಷಣೆ.
* ಸಣ್ಣ ಕೈಗಾರಿಕೆಗಳಿಗೆ 1 ಕೋಟಿ ರೂಪಾಯಿಯಷ್ಟು ಸಾಲದ ಮೇಲೆ ಶೇಕಡಾ 2 ರಷ್ಟು ಬಡ್ಡಿ ವಿನಾಯಿತಿ.ಕುಡಿಯುವ ನೀರು, ನದಿ ಶುದ್ದೀಕರಣ, ಎಲೆಕ್ಟ್ರಿಕ್ ವೆಹಿಕಲ್, ಬಾಹ್ಯಾಕಾಶ ಸೇರಿದಂತೆ ಹಲವಯ ಕ್ಷೇತ್ರಗಳಿಗೆ ರೂಪುರೇಷೆ. ಆರೋಗ್ಯ, ಸರ್ಕಾರಿ, ಆಡಳಿತದಲ್ಲಿ ಸುಧಾರಣೆ ಘೋಷಣೆ.
* ಹೀರೊಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್‌ ಮೋಟಾರ್ಸ್‌ ಕಂಪನಿಗಳ ದ್ವಿಚಕ್ರ ವಾಹನಗಳ ಮೇಲಿರುವ ಶೇ28ರ ಜಿಎಸ್‌ಟಿ ಹೊರೆಯನ್ನು ಶೇ18ಕ್ಕೆ ಇಳಿಸಲು ಕ್ರಮ.
* ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76 ಸಾವಿರ ಕೋಟಿ ರೂ. ಅನುದಾನ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 38 ಸಾವಿರ ಕೋಟಿ ರೂ ಅನುದಾನ.
* ಜಾಗತಿಕ ತಾಪಮಾನ ಇಳಿಕೆಗೆ ಭಾರತ ನಿರ್ಧಾರ. ಸೋಲಾರ್​ ವಿದ್ಯುತ್​ ಬಳಕೆ ಕಳೆದ ಐದು ವರ್ಷಗಳಲ್ಲಿ ದ್ವಿಗುಣ. ಸೋಲಾರ್​ ಕ್ಷೇತ್ರದಿಂದ ಉದ್ಯೋಗಗಳು ಸೃಷ್ಟಿ. ಬಯೋ ಫ್ಯೂಲ್​ ಮತ್ತು ಇನ್ನಿತರ ತಂತ್ರಜ್ಞಾನಗಳ ಅಳವಡಿಕೆ.
* ಎಂಎಸ್​ಎಂಇ ಕ್ಷೇತ್ರಕ್ಕೆ 59 ನಿಮಿಷಗಳಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button