Latest
ಎನ್ನೆಸ್ಸೆಸ್ ಶಿಬಿರದಲ್ಲಿ ಗಣಕ ಯಂತ್ರ ಬಳಕೆ ಉಪನ್ಯಾಸ
ಪ್ರಗತಿವಾಹಿನಿ ಸುದ್ದಿ, ರಾಯಬಾಗ:
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ನೆಸ್ಸೆಸ್ ಕ್ಯಾಂಪ್‌ನ ೪ನೇ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ’ವಿಜ್ಞಾನಕ್ಕಾಗಿ ಯುವಕರು ಮತ್ತು ಗಣಕ ಯಂತ್ರದ ಮಹತ್ವ’ ಕುರಿತು ವಿಶೇಷ ಉಪನ್ಯಾಸ ಶಿಬಿರ ಆಯೋಜಿಸಲಾಗಿತ್ತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಜಿಲ್ಲಾ ಯುವಪರಿವರ್ತಕ ಮಹಮದ್ ಅಜರುದ್ದೀನ ಉಸ್ಮಾನ ಶೇಖಜಿ ಮಾತನಾಡಿ, ಜೀವನದಲ್ಲಿ ಹೇಗೆ ಗುರಿ ಮುಟ್ಟಬೇಕು ಎಂಬ ಕುರಿತು ಹಾಗೂ ತಂದೆ-ತಾಯಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾಗೀರಥಿ ಹಾಲಳ್ಳಿ ಉಪನ್ಯಾಸ ನೀಡಿದರು. ಶ್ರದ್ಧಾ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಸುಭಾಷ ಕಚಕರಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎನ್ನೆಸ್ಸೆಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.




