Latest

*ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ: ಡಿಲಿಟ್ ಆಗಿರುವ ಮತದಾರರು ಎಷ್ಟು? ಆಯುಕ್ತರು ಹೇಳಿದ್ದೇನು?*

ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ya ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಥಿ ನಡೆಸಿದ ಅನ್ಬುಕುಮಾರ್, ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, 4,54,55,689 ಮತದಾರರು ಇದ್ದಾರೆ. ಮಹಿಳೆಯರು- 2,29,15,196 ಹಾಗೂ ಪುರುಷರು 2,25,40,493 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಎಸ್ಐಆರ್ ಬಳಿಕ ರಾಜ್ಯದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದಾರೆ. ಆ ಮೂಲಕ ರಾಜ್ಯದಲ್ಲಿ ಎಸ್ಐಅರ್ ಬಳಿಕ 99.32 ಲಕ್ಷ ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ.

ರಾಜ್ಯದಲ್ಲಿ ಎಸ್ಐಆರ್ ಮುಂಚೆ 5.54 ಕೋಟಿ ಮತದಾರರು ಇದ್ದರು. ಅದೇ ಎಸ್ಐಆರ್​ನ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.46 ಕೋಟಿಗೆ ಇಳಿಕೆಯಾಗಿತ್ತು. ಇದೀಗ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ 4.55 ಕೋಟಿ ಮತದಾರರು ಇರಲಿದ್ದಾರೆ.

ಆ ಮೂಲಕ ಎಸ್ಐಆರ್ ಮುಂಚೆ ಇದ್ದ ಮತದಾರರ ಸಂಖ್ಯೆಯಿಂದ ಸುಮಾರು 99.32 ಲಕ್ಷ ಮತದಾರರ ಕಡಿತವಾಗಿದೆ.‌ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ತನ್ನ ವೆಬ್​ಸೈಟ್ https://ceo.karnataka.gov.in/enನಲ್ಲಿ ಪ್ರಕಟಿಸಿದೆ.

ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ರಾಜ್ಯದಲ್ಲಿ ಮಹಿಳಾ ಮತದಾರರು 2,29,12,355 ಮತದಾರರು ಇದ್ದರೆ, 2,25,40,493 ಪುರುಷ ಮತದಾರರು ಇದ್ದಾರೆ. 2,841 ಇತರೆ ಮತದಾರರು ಇದ್ದಾರೆ. ಸಾಗರೋತ್ತರ ಮತದಾರರ ಸಂಖ್ಯೆ 3,252 ಇದ್ದರೆ, 18-19 ವಯೋಮಾನದ 6,83,364 ಮತದಾರರು ಇದ್ದಾರೆ. ಇನ್ನು 85+ ವಯೋಮಾನದ 3,92,134 ಮತದಾರರು ಇದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button