ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕನ್ನಡದ ಪ್ರಮುಖ ಸಿನಿಮಾ ದಿಗ್ಗಜರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಿವರಾಜ ಕುಮಾರ, ಪುನೀತ ರಾಜಕುಮಾರ, ಸುದೀಪ್, ರಾಕಲೈನ್ ವೆಂಕಟೇಶ, ವಿಜಯ ಕಿರಗಂದೂರು, ಸಿ.ಆರ್.ಮನೋಹರ, ಯಶ್, ಜಯಣ್ಣ, ಆನಂದ ಸೇರಿದಂತೆ 10ಕ್ಕೂ ಹೆಚ್ಚು ಜನರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಬೆಳಗ್ಗೆಯೇ ದಾಳಿ ನಡೆಸಿ ಪರಿಶೀಲನೆ ಆರಂಭಿಸಿರುವ ಅಧಿಕಾರಿಗಳ ತಂಡ ಕಲಾವಿದ ಆದಾಯ, ಘೋಷಿಸಲ್ಪಟ್ಟಿರುವ ಆದಾಯ ಮತ್ತು ಘೋಷಿಸದೇ ಇರುವ ಆದಾಯಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನಾಭರಣ ಪರಿಶೀಲನೆಗಾಗಿ ತಜ್ಞರನ್ನು ಕರೆಸಲಾಗಿದೆ.
ಶಿವರಾಜ ಕುಮಾರ ಮತ್ತು ಪುನೀತ ರಾಜಕುಮಾರ ಮನೆಗಳ ಮುಂದೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ