Latest

ಕಬ್ಬಿನ ಲಾರಿಗೆ ಬೊಲೆರೋ ಡಿಕ್ಕಿ: 6 ಜನರ ಸಾವು

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಗೋಕಾಕ ತಾಲೂಕಿನ ನಂದಿಕಟ್ಟಿ ಬಳಿ ರಾತ್ರಿ 1 ಗಂಟೆ ಹೊತ್ತಿಗೆ ಕಬ್ಬು ತುಂಬಿದ್ದ ಲಾರಿ ಹಾಗೂ ಬೊಲೆರೋ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ. 8 ಜನ ತೀವ್ರ ಗಾಯಗೊಂಡಿದ್ದಾರೆ.

ಯಲ್ಲವ್ವ ಕಂಡ್ರಿ (60), ನೀಲವ್ವ ಸೋಲಕ್ಕನವರ್ (40), ಅನಸೂಯಾ ನಾಯ್ಕರ್ (38), ಪಾರವ್ವ ಕಂಡ್ರಿ (30), ಭೀಮಸೆಪ್ಪ ಪೂಜೇರಿ (38), ಮಹಾದೇವ ಕೆಮ್ಮನಕೋಲ (30) ಸಾವಿಗೀಡಾದವರು.

ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಾಲ್ವರು ಸ್ಥಳದಲ್ಲೇ ಸಾವಿಗೀಡಾದರೆ, ಇಬ್ಬರು ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲ ಸವದತ್ತಿ ತಾಲೂಕಿನವರು ಎಂದು ಗೊತ್ತಾಗಿದೆ.

Related Articles

Back to top button