ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಜಿನೆಸ್ ಮ್ಯಾನೇಜ್ಮೆಂಟ್ ಜನೇವರಿ 23-24 ರಂದು ಎರ್ಪಡಿಸಿದ್ದ ರಾಷ್ಟ ಮಟ್ಟದ ವ್ಯವಸ್ಥಾಪನಾ ಸ್ಪರ್ಧೆ ಸಿನರ್ಜಿ-2019 ರಲ್ಲಿ ಕೆಎಲ್ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಸಿನರ್ಜಿ-2019ರಲ್ಲಿ ಪೃಥ್ವಿ ಬಾಳೇಕುಂದ್ರಿ-ಅತ್ಯುತ್ತಮ ವ್ಯವಸ್ಥಾಪಕ, ಅಬ್ದುಲ್ ಬಸೀತ್-ರಸಪ್ರಶ್ನೆಯಲ್ಲಿ ಪ್ರಥಮ, ರಾಶಿ ಶಿರಗುಪ್ಪಿ- ಮಾನವ ಸಂಪನ್ಮೂಲದಲ್ಲಿ ದ್ವಿತೀಯ, ಶುಧಾಶ್ನು-ಹಣಕಾಸು ವಿಭಾಗದಲ್ಲಿ ದ್ವಿತೀಯ ಹಾಗೂ ಓಂಕಾರ-ಮಾರುಕಟ್ಟೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ