
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಮಾನ ಹತ್ತಲು ಕಾದು ಕುಳಿತಿದ್ದ 50 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಗೋ ಫಸ್ಟ್ ವಿಮಾನ ಟೇಕಾಫ್ ಆದ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಗೋ ಫಸ್ಟ್ ವಿಮಾನ ಸಂಸ್ಥೆ ವಿರುದ್ಧ ಪ್ರಯಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ಹೋಗಬೇಕಿದ್ದ 50 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ವಿಮಾನ ಟೇಕ್ ಆಫ್ ಆಗಿದ್ದು, ಈ ಬಗ್ಗೆ ಡಿಜಿಸಿಎ ವಿಮಾನಯಾನ ಸಂಶೆಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿ ತನಿಖೆಗೆ ಆದೇಶಿಸಿದೆ.
ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಜಿ8 116 ವಿಮಾನ ಈ ಪ್ರಮಾದ ಎಸಗಿದ್ದು, ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ನಿಲ್ದಾಣದಲ್ಲಿದ್ದ ಕಚೇರಿಯ ಸಿಬ್ಬಂದಿಯ ನಡುವೆ ಸಂವಹನ ಕೊರತೆಯಿಂದ ಎಡವಟ್ಟು ಮಾಡಿಕೊಂಡಿದೆ
ಗೋ ಫಸ್ಟ್ ವಿಮಾನ ಹತ್ತಲು ಪ್ರಯಾಣಿಕರನ್ನು ನಾಲ್ಕು ಬಸ್ ಗಳಲ್ಲಿ ವಿಮಾನದ ಹತ್ತಿರ ಕರೆದೊಯ್ಯಲಾಯಿತು. ಮೂರು ಬಸ್ ಗಳಲ್ಲಿದ್ದ ಪ್ರಯಾಣಿಕರು ವಿಮಾನವೇರಿದ್ದರು. ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಕರು ಬರುತ್ತಿದ್ದರು. ಅಷ್ಟರಲ್ಲೇ ವಿಮಾನ ಹಾರಾಟ ನಡೆಸಿ ದೆಹಲಿಗೆ ಪ್ರಯಾಣಿಸಿದೆ.
ವಿಮಾನಯಾನ ಸಂಸ್ಥೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಹಲವು ಪ್ರಯಾಣಿಕರು ಟ್ಯಾಗ್ ಮಾಡಿ ಟ್ವಿಟ್ಟರ್’ನಲ್ಲಿ ದೂರು ನೀಡಿದ್ದಾರೆ. ಇದೊಂದು ಭಯಾನಕ ಅನುಭವ ಎಂದು ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಮೆಟ್ರೊ ಕಾಮಗಾರಿ ಪಿಲ್ಲರ್ ದುರಂತ: ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ*
https://pragati.taskdun.com/metro-piller-tragidymotherson-deathcm-basavaraj-bommai20-lakh-announce/