Latest

ಚುನಾವಣಾ ವೀಕ್ಷಕರ ಭೇಟಿ; ಮತ ಎಣಿಕೆ ಕೇಂದ್ರ, ಸ್ಟ್ರಾಂಗ್ ರೂಂ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ಲೋಕಸಭಾ ಚುನಾವಣೆಯ ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ರಾಜೀವ ಚಂದ್ರ ದುಬೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗುತ್ತಿರುವ ನಗರದ ಆರ್.ಪಿ.ಡಿ ಮಹಾವಿದ್ಯಾಲಯಕ್ಕೆ ಸೋಮವಾರ(ಏ.೮) ಭೇಟಿ ನೀಡಿ, ಮತ ಎಣಿಕೆ ಕೊಠಡಿಗಳು ಹಾಗೂ ಮತಯಂತ್ರಗಳನ್ನು ಇರಿಸುವ ಸ್ಟ್ರಾಂಗ್ ರೂಂ ಗಳನ್ನು ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರವೇ ನಿರ್ಮಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕೊಠಡಿಗಳು ಹಾಗೂ ಸ್ಟ್ರಾಂಗ್ ರೂಂ ನಿರ್ಮಾಣ ಕೆಲಸ ಪರಿಶೀಲಿಸಿದ ಅವರು, ಮತ ಎಣಿಕೆ ದಿನ ಭದ್ರತೆ ಸೇರಿದಂತೆ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು.

 ಈ ಬಾರಿ ಹೆಚ್ಚುವರಿ ಬ್ಯಾಲೆಟ್ ಯುನಿಟ್‌ಗಳನ್ನು ಬಳಸಬೇಕಿರುವುದರಿಂದ ಅಗತ್ಯಕ್ಕೆ ಅನುಸಾರ ಇನ್ನಷ್ಟು ಕೊಠಡಿಗಳನ್ನು ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಚುನಾವಣಾ ವೀಕ್ಷಕರಿಗೆ ವಿವರಿಸಿದರು.

ಮತ ಯಂತ್ರ, ವಿವಿಪ್ಯಾಟ್ ಹಾಗೂ ಬ್ಯಾಲೆಟ್ ಯೂನಿಟ್‌ಗಳನ್ನು ಪ್ರಾಯೋಗಿಕವಾಗಿ ಸ್ಟ್ರಾಂಗ್ ರೂಂ ನಲ್ಲಿರಿಸಿ ಖುದ್ದಾಗಿ ಪರಿಶೀಲಿಸುವ ಮೂಲಕ ನಿಯಮ ಪಾಲನೆಯನ್ನು ಖಚಿತಪಡಿಸಿಕೊಂಡರು.

ಮತ ಎಣಿಕೆ ಕೌಂಟರ್‌ಗಳು, ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ಕಲ್ಪಿಸಲಾಗುತ್ತಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ನಂತರ ಮತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಲಾಗುವ ಸಾಮಾನ್ಯ ವೀಕ್ಷಕರ ಕೊಠಡಿ, ಚುನಾವಣಾಧಿಕಾರಿಗಳ ಕೊಠಡಿ, ಮಾಧ್ಯಮ ಕೇಂದ್ರ ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ನಿಗದಿಪಡಿಸಲಾದ ಕೊಠಡಿಗಳನ್ನು ಸಾಮಾನ್ಯ ವೀಕ್ಷಕ ರಾಜೀವಚಂದ್ರ ದುಬೆ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಪರಿಶೀಲಿಸಿದರು.

 ಭದ್ರತಾ ಕ್ರಮಗಳ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ ಕುಮಾರ ಅವರು, ಚುನಾವಣಾ ವೀಕ್ಷಕರಿಗೆ ವಿವರಿಸಿದರು.

ಡಿಸಿಪಿ ಸೀಮಾ ಲಾಟ್ಕರ್, ಡಿಸಿಪಿ ಯಶೋಧಾ ಒಂಟಗೋಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ ಹುಲಕಾಯಿ, ಹೆಸ್ಕಾಂ, ಎನ್‌ಐಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button