ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಹಳ್ಳಿಗಳಲ್ಲಿ ಜರುಗುವ ಜಾತ್ರೆಗಳಿಂದ ನಮ್ಮ ಭವ್ಯ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ದೇವಸ್ಥಾನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರ ಮೂಲಕ ಸ್ವಚ್ಛ ಭಾರತಕ್ಕೆ ಸಹಕರಿಸಬೇಕೆಂದು ಸಂಸದ ಸುರೇಶ ಅಂಗಡಿ ಹೇಳಿದರು.
ಸಮೀಪದ ಮಸಗುಪ್ಪಿಯ ಶ್ರೀ ಮಹಾಲಕ್ಷ್ಮಿದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರೆಯಲ್ಲಿ ಭಾಗವಹಿಸಿ ಜಾತ್ರಾ ಕಮಿಟಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶ್ರೀ ಮಹಾಲಕ್ಷ್ಮೀದೇವಿ ಕಟ್ಟಡವನ್ನು ನೋಡಿದರೆ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಬಂದಷ್ಟು ಸಂತಸವಾಗಿದೆ ಎಂದರು.
ಹಳ್ಳಿಗಳಲ್ಲಿ ಬಂಡಾರ ಹಾರಿಸುವುದು ರೂಢಿ. ಆದರೆ ಕೆಮಿಕಲ್ ಮಿಶ್ರಿತ ಬಂಡಾರ ಉಪಯೋಗವಾಗದಂತೆ ಜಾಗೃತಿ ವಹಿಸಿ ಎಂದ ಅವರು, ಶ್ರೀ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪ ನಿರ್ಮಿಸಲು ಅನುದಾನ ನೀಡುವ ಭರವಸೆ ನೀಡಿದರು.
ಗ್ರಾಮದ ಹಿರಿಯರಾದ ಬಾಳಪ್ಪಾ ಕೊಳವಿ, ಸಾತಪ್ಪಾ ಕೊಳದುರ್ಗಿ, ರಾಮಣ್ಣ ಗಂಗನ್ನವರ, ಬೀಮಶೆಪ್ಪಾ ಬಡ್ನಿಂಗೋಳ, ಸಂಜು ಹೊಸಕೋಟಿ, ಬಸವರಾಜ ಬುಜನ್ನವರ, ಬಸವರಾಜ ಗಾಡವಿ, ಈಶ್ವರ ಗಾಡವಿ, ಭರಮಪ್ಪಾ ಆಶಿರೊಟ್ಟಿ, ಭರಮಪ್ಪಾ ಗಂಗಣ್ಣವರ, ಮುರಗೆಪ್ಪಾ ಗಾಡವಿ ಮತ್ತಿತರರು ಇದ್ದರು.