Latest

ಟಿಜಿಟಿ ಶಿಕ್ಷಕರಿಗೆ ಸಿಹಿ ಸುದ್ದಿ; ಶಿಕ್ಷಣ ಇಲಾಖೆಯ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಟಿಜಿಟಿ ಶಿಕ್ಷಕರನ್ನು ಹೈಸ್ಕೂಲ್ ಗಳಿಗೆ ಮರು ಹೊಂದಣಿಕೆ ಮಾಡುವಂತೆ ಶಿಕ್ಷಣ  ಇಲಾಖೆ ಆದೇಶಿಸಿದೆ.

ತಕ್ಷಣ ಮರುಹೊಂದಾಣಿಕೆಗೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುವ ಶಿಕ್ಷಣ ಇಲಾಖೆ, ಆ ನಂತರವೂ ಖಾಲಿ ಹುದ್ದೆಯ ಅಲಭ್ಯತೆಯಿಂದಾಗಿ ಟಿಜಿಟಿ ಶಿಕ್ಷಕರು ಅದೇ ಸ್ಥಳದಲ್ಲಿದ್ದರೆ 3 ವರ್ಷದೊಳಗೆ ಕಡ್ಡಾಯವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಿದೆ. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಮರುಹೊಂದಾಣಿಕೆಗೆ ಸೂಚಿಸಿರುವ ಕ್ರಮಗಳು ಹೀಗಿವೆ: 

  1. ಸಂಯುಕ್ತ ಪ್ರೌಢ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ ಪಿಸಿಎಂ ಹುದ್ದೆ ಖಾಲಿ ಇದ್ದಲ್ಲಿ ಅದೇ ಶಾಲೆಯ ಟಿಜಿಟಿ ಶಿಕ್ಷಕರನ್ನು ಮರುಹೊಂದಾಣಿಕೆ ಮಾಡಬೇಕು.
  2. ಟಿಜಿಟಿ ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲಿ ಹೊಸ ಪ್ರೌಢ ಶಾಲೆ ಪ್ರಾರಂಭವಾದಲ್ಲಿ ಟಿಜಿಟಿ ಶಿಕ್ಷಕರನ್ನು ಪ್ರೌಢ ಶಾಲೆಯ ಪಿಸಿಎಂ ಹುದ್ದೆಗೆ ಮರುಹೊಂದಾಣಿಕೆ ಮಾಡಬೇಕು.
  3. 8ನೇ ತರಗತಿ ಇಲ್ಲದಿರುವ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಿಜಿಟಿ ಶಿಕ್ಷಕರನ್ನು ಹೆಚ್ಚುವರಿ  ಎಂದು ಗುರುತಿಸಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಪ್ರೌಢ ಶಾಲೆಗಳಿಗೆ ಮರು ಹೊಂದಾಣಿಕೆ ಮಾಡಬೇಕು. 
  4. ಹಾಲಿ ಇರುವ ಟಿಜಿಟಿ ಶಿಕ್ಷಕರ ಸ್ಥಳದಲ್ಲಿ ಎಜಿಟಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 

ಈ ಎಲ್ಲ ಕ್ರಮಗಳ ನಂತರವೂ ಟಿಜಿಟಿ ಶಿಕ್ಷಕರ ಮರು ಹೊಂದಾಣಿಕೆಗೆ ಖಾಲಿ ಹುದ್ದೆಗಳು ಇಲ್ಲದಿದ್ದಲ್ಲಿ 3 ವರ್ಷದೊಳಗೆ ಹಂತ ಹಂತವಾಗಿ ಮರುಹೊಂದಾಣಿಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ಇದರಿಂದಾಗಿ, ನೇಮಕವಾದಾಗಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಟಿಜಿಟಿ ಶಿಕ್ಷಕರು ಸಮಸ್ಯೆಗಳಿಂದ ಮುಕ್ತರಾಗುವ ಕಾಲ ಸನ್ನಿಹಿತವಾದಂತಾಗಿದೆ. 

 

(ಪ್ರಗತಿವಾಹಿನಿ ಸುದ್ದಿಗಳನ್ನು ಪರಿಚಿತರಿಗೆ ಶೇರ್ ಮಾಡಿ, ನಿರಂತರ ಸುದ್ದಿಗಳಿಗಾಗಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿರಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button