ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಅವರ ಪತಿ ಪ್ರಶಾಂತ ಐಹೊಳೆ ಹೆಸರಿನ ಮಹಾಲಕ್ಷ್ಮೀ ಮಲ್ಟಿ ಹಾಗೂ ಡಿಸ್ಟ್ರಿಕ್ಟ್ ಪ್ರೈವೇಟ್ ಸಂಸ್ಥೆಯಲ್ಲಿ ಇಟ್ಟಿದ್ದ ಠೇವಣಿ ಮರಳಿ ಕೊಡಿಸುವಂತೆ ಒತ್ತಾಯಿಸಿ ಸೋಮವಾರ ಠೇವಣಿದಾರರು ಸುವರ್ಣ ವಿಧಾನ ಸೌಧದ ಹತ್ತಿರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಕನ್ನಡ ಸಾಹಿತ್ಯ ಭವನದ ಬಳಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಠೇವಣಿದಾರರು ನಂತರ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟಿಸಿದರು. ಅಥಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಯಲ್ಲಿ ಕೋಟ್ಯಂತರ ರೂ. ಹಣವನ್ನು ಗ್ರಾಹಕರು ಠೇವಣಿ ಇಟ್ಟದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ನಿಪ್ಪಾಣಿ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗ್ರಾಹಕರು ಠೇವಣಿ ಇಟ್ಟಿದ್ದಾರೆ. ಹಲವು ಬಾರಿ ಹಣ ಮರಳಿಸುವಂತೆ ಆಶಾ ಐಹೊಳೆ ಹಾಗೂ ಪ್ರಶಾಂತ ಐಹೊಳೆ ಅವರನ್ನು ಕೇಳಿಕೊಂಡರು ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರ ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಸ್ಥೆಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶಿಲ್ಪಾ ಪಾಟೀಲ, ಸಂಜಯ ಪರೀಟ, ಶ್ರೀಧರ ಪೂಜೇರಿ, ವಸಂತ ದಳವಿ, ಶ್ರೀಪತಿ ಲವಟೆ, ಪ್ರಶಾಂತ ಮಾನೆ, ರೂಪಾಲಿ ಖೋತ, ಶಂಕರ ಖೋತ, ಆನಂದಾ ವಾಳ್ವೇಕರ, ಪ್ರಕಾಶ ಖಾಡೆ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ