Latest

ಸದನದಲ್ಲಿ ಸೆಕ್ಸ್ ವಿಡಿಯೊ ವೀಕ್ಷಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಶಾಸಕ

ಪ್ರಗತಿವಾಹಿನಿ ಸುದ್ದಿ, ಅಗರ್ತಲಾ: ಸದನದಲ್ಲಿ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ವೀಕ್ಷಿಸುದ್ದಾಗ ಸಿಕ್ಕಿಬಿದ್ದು ಬಿಜೆಪಿಗೆ ಮುಖಭಂಗ ತಂದ ಶಾಸಕರೊಬ್ಬರು ವಿಡಿಯೊ ವೀಕ್ಷಿಸಿದ್ದಕ್ಕೆ ಕಾರಣವನ್ನೂ ಹೇಳಿಕೊಂಡಿದ್ದಾರೆ.

ಶಾಸಕ ಜದಬ್ ಲಾಲ್ ದೇಬನಾಥ್ ಅವರು ಸದನದ ಕಲಾಪ ನಡೆಯುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೊ ವೀಕ್ಷಿಸುತ್ತಿದ್ದರು. ಈ ವೇಳೆ ಸಿಸಿ ಕ್ಯಾಮರಾದಲ್ಲಿ ಕಳ್ಳಾಟದ ದೃಶ್ಯ ದಾಖಲಾಗಿ ಎಲ್ಲೆಡೆ ವೈರಲ್ ಆಗುತ್ತಲೇ ತ್ರಿಪುರಾ ರಾಜ್ಯದ ಬಿಜೆಪಿ ಇನ್ನಿಲ್ಲದ ಮುಜುಗರ ಅನುಭವಿಸುವಂತಾಯಿತು.

“ನನಗೊಂದು ಕರೆ ಬಂತು, ನಾನು ಅದನ್ನು ಸ್ವೀಕರಿಸುತ್ತಿದ್ದಂತೆ ವೀಡಿಯೊ ಪ್ಲೇ ಆಗಲು ಪ್ರಾರಂಭಿಸಿತು. ನಾನು ತಕ್ಷಣವೇ ವಿಂಡೊ ಕ್ಲೋಸ್ ಮಾಡಿದೆ” ಎಂದು ಜದಬ್ ಲಾಲ್ ಸ್ಪಷ್ಟನೆ ನೀಡಿದ್ದಾರೆ.

ಜದಬ್ ಲಾಲ್ ಅವರ ಕೃತ್ಯ ಹಾಗೂ ಅದಕ್ಕೆ ನೀಡಿದ ಸ್ಪಷ್ಟನೆ ತೀವ್ರ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ಪಕ್ಷ ದೇಬನಾಥ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಬಿಜೆಪಿ ತ್ರಿಪುರಾ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಯ ಅವರು ಪಕ್ಷ ಶೀಘ್ರದಲ್ಲೇ ಸಂಬಂಧಪಟ್ಟ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟೀಕರಣ ಪಡೆಯಲಿದೆ ಎಂದು ತಿಳಿಸಿದ್ದಾರೆ.

Home add -Advt

“ವಿಧಾನಸಭೆಯೊಳಗೆ ಮೊಬೈಲ್ ಫೋನ್‌ಗಳ ಕಾರ್ಯಾಚರಣೆಯನ್ನು ನಿರ್ಬಂಧಿಸಲಾಗಿದೆ. ನಾವೆಲ್ಲರೂ ಸದನದ ನಡಾವಳಿಗಳು ಮತ್ತು ವ್ಯವಹಾರಗಳ ಮೇಲೆ ಲಕ್ಷ್ಯ ಕೇಂದ್ರೀಕರಿಸಬೇಕು. ಅದನ್ನು ಬಿಟ್ಟು ದೇಬನಾಥ್ ಅವರು ಸದನದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಸೆಕ್ಸ್ ವೀಡಿಯೊ ವೀಕ್ಷಿಸಿದ್ದಾರೆ,” ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬಿರಾಜಿತ್ ಸಿನ್ಹಾ ಹೇಳಿದ್ದಾರೆ.

https://pragati.taskdun.com/bjp-will-achieve-unprecedented-victory-with-full-majority-in-karnataka-amit-shah/
https://pragati.taskdun.com/sudden-transfer-of-4-ias-officers-including-mg-hiremath/
https://pragati.taskdun.com/dr-anjali-nimbakar-started-the-campaign-by-offering-worship-to-the-deities/

Related Articles

Back to top button