Latest

ನಂದಗಡದಲ್ಲಿ ಹಾಡಹಗಲೇ 5 ಲಕ್ಷ ರೂ. ಮೌಲ್ಯದ ಕಳ್ಳತನ

   ಪ್ರಗತಿವಾಹಿನಿ ಸುದ್ದಿ, ಖಾನಾಪುರ

ತಾಲ್ಲೂಕಿನ ನಂದಗಡ ಗ್ರಾಮದ ನಾಲ್ಕು ಮನೆಗಳಲ್ಲಿ ಹಾಡಹಗಲೇ ಕಳ್ಳತನ ನಡೆದು ಲಕ್ಷಾಂತರ ಮೌಲ್ಯದ ನಗ-ನಾಣ್ಯ ಕಳ್ಳರ ಪಾಲಾಗಿದೆ.

Home add -Advt

ನಂದಗಡ ಗ್ರಾಮದ ಮಹಾದೇವ ದಳವಿ, ಅಶೋಕ ಪಾಟೀಲ, ಶಹಾನಾಜ ಬೇಪಾರಿ, ಆಲಮ್ ಪಟೇಲ ಅವರ ಮನೆಗಳಿಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ನಾಲ್ಕೂ ಕಡೆ ಸೇರಿ ಒಟ್ಟು ಐದು ಲಕ್ಷ ರೂ. ಮೌಲ್ಯದ ನಗ-ನಾಣ್ಯ ಹೊತ್ತೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Related Articles

Back to top button