ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಂಗಭೂಮಿಯು ಎಲ್ಲಾ ಕಾಲದಲ್ಲೂ ಮನುಷ್ಯನ ವ್ಯಕ್ತಿತ್ವವನ್ನು ತಿದ್ದುತ್ತಾ ಸಾಮಾಜಿಕ ಅರಿವು ಮೂಡಿಸುತ್ತಾ ಬರುತ್ತದೆ. ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಭಾಷೆಯನ್ನು ಪರಿಷ್ಕರಿಸುತ್ತದೆ. ಮನುಷ್ಯನ ಮನಸ್ಥಿತಿಯಂತೆ ಭಾಷೆಯ ನುಡಿಗಟ್ಟುಗಳನ್ನು ಸೃಜಿಸುತ್ತದೆ ಎಂದು ರಂಗ ಚೇತನ ಪುರಸ್ಕೃತ ಯಮನಪ್ಪ ಜಾಲಗಾರ ಹೇಳಿದರು.
ಶ್ರೀ ಗಜಾನನ ಸ್ವ-ಸಹಾಯ ಸಂಘ ಬೈಲವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಹಕಾರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕಾರ್ತಿಕೋತ್ಸವ ನಿಮಿತ್ತ ನಡೆದ ನಾಟಕ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಫಕ್ಕೀರಪ್ಪ ಮಧನಭಾವಿ, ಇಂತಹ ನಾಟಕಗಳು ನಶಿಸಿ ಹೋಗದಂತೆ ಈಗಿನ ಯುವ ಪೀಳಿಗೆಯು ಶಾಲಾ-ಕಾಲೇಜುಗಳಲ್ಲಿ ನಾಟಕಗಳ ಮೂಲಕ ರಂಗಭೂಮಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ದೊಡ್ಡವ್ವ ಗಿರಿಯಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಪ್ರಮೋದಕುಮಾರ ಕೆಂಗೇರಿ, ಶಿವಕುಮಾರ ಮಂಗಳೂರ, ಫಕ್ಕೀರಪ್ಪ ಮಧನಭಾವಿ ಹಾಗೂ ಯಮನಪ್ಪ ಜಾಲಗಾರ ಅವರನ್ನು ಸನ್ಮಾನಿಸಲಾಯಿತು.
ನಂತರ ಸಂಗ್ಯಾ-ಬಾಳ್ಯಾ ನಾಟಕ ನಡೆಯಿತು. ಸಂಗ್ಯಾನ ಪಾತ್ರದಲ್ಲಿ ಬಸಪ್ಪ ಹೊಸೂರು, ಬಾಳ್ಯಾನ ಪಾತ್ರದಲ್ಲಿ ಯಮನಪ್ಪ ಕುರುಬರ, ವಿರುಪಾಕ್ಷಿ-ರಾಜಶೇಖರ ಎಸ್, ಗಂಗಾ-ಚಂದ್ರವ್ವ ಸಾನಳ್ಳಿ ಮುದ್ದೂರು-ಮೋಹನ ನಾಯ್ಕ, ಶೇಟಜಿ-ಮಕದುಮ್ಮಸಾಬ ಮುನವಳ್ಳಿ, ತಬಲಾ-ಶಿವನಪ್ಪ ಮೀಸೆಗೇರಿ, ಹಾರ್ಮೋನಿಯಂ-ಚನ್ನಪ್ಪ ಮದ್ದನಳ್ಳಿ, ಹಿನ್ನೆಲೆ ಸಂಗೀತದಲ್ಲಿ ಸುರೇಶ ದಾನಮ್ಮನವರು, ಬಸಲಿಂಗಪ್ಪ ಹೊಸೂರ, ಶಂಕರಗೌಡ ಪಾಟೀಲ, ಶಿವಾನಂದ ಹಿರೇಮಠ, ಶಿವಬಸಪ್ಪ ದೇಸಾಯಿ, ಗದಿಗೆಪ್ಪ ಮದ್ದನಳ್ಳಿ ನಡೆಸಿಕೊಟ್ಟರು. ಶಿವನಗೌಡರ ನಿರೂಪಿಸಿದರು. ಈಶ್ವರ ನಾಯಕ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ