Latest

ಪೆಟ್ರೋಲ್ ಬಂಕ್ ನಲ್ಲಿ ಇಬ್ಬರ ಕಗ್ಗೊಲೆ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು:

ಚನ್ನಮ್ಮನ ಕಿತ್ತೂರು ಬಳಿ ಶಿವ ಪೆಟ್ರೋಲ್ ಪಂಪ್ ನಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಮಂಗಳವಾರ ತಡರಾತ್ರಿ ಕಗ್ಗೊಲೆ ಮಾಡಲಾಗಿದೆ.

Home add -Advt

ದೇವಗಾವ ಬಳಿಯ ಲಿಂಗದಲ್ಲಿಯ ಮಂಜುನಾಥ್ ಪಟ್ಟಣಶೆಟ್ಟಿ (22) ಮತ್ತು ತಿಗಡೊಳ್ಳಿಯ ಮುಸ್ತಾಕ ಬೀಡಿ (32)ಕೊಲೆಯಾದ ವ್ಯಕ್ತಿಗಳು..
ಮಲಗಿದ್ದವರ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಇಬ್ಬರ ಕತ್ತು ಕೊಯ್ದ ಕೊಲೆ ಮಾಡಿದ್ದಾರೆ.
ಕಿತ್ತೂರು ಧಾರವಾಡ ಗಡಿಯಲ್ಲಿ ಪಂಪ್ ಇದೆ. ಸ್ಥಳಕ್ಕೆ ಆಗಮಿಸಿರುವ ಕಿತ್ತೂರು ಮತ್ತು ಧಾರವಾಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಠಾಣಾ ವ್ಯಾಪ್ತಿಗೆ ಈ ಪ್ರಕರಣ ಬರುತ್ತದೆ.

Related Articles

Back to top button