Latest

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ವಿತರಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
 ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಡಿಯಲ್ಲಿ ಬೆಳಗಾವಿಯ ಗಾಂಧಿ ನಗರದಲ್ಲಿ ಸುಮಾರು 60 ಫಲಾನುಭವಿಗಳಿಗೆ ಇಂದು ಶಾಸಕ ಅನಿಲ ಬೆನಕೆ ಉಚಿತವಾಗಿ ಗ್ಯಾಸ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಪ್ರಧಾನ ಮಂತ್ರಿಗಳು ಭಾರತವನ್ನು ಹೊಗೆ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲ ಬಡ ವರ್ಗದ ಜನರಿಗೂ ಗ್ಯಾಸ್ ವಿತರಿಸುವ ಸಲುವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದು ಬಡವರ್ಗದ ಜನರ ಪ್ರೀತಿ ಪಾತ್ರರಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಮಹೇಶ್ವರಿ ಸೋಮಜಿಚೆ, ಸಂತೋಷ ಸೋಮಜಿಚೆ, ನಿಖಿಲ ಮುರಕುಟೆ, ನಾಗೇಶ ಲಂಗರಖಂಡೆ, ಆಕಾಶ ಎಂಟರ್‌ಪ್ರೈಸಿಸಿ ಮ್ಯಾನೇಜರ ನಾಯಕ್  ಉಪಸ್ಥಿತರಿದ್ದರು.

 

(ಪ್ರಗತಿವಾಹಿನಿ ಸುದ್ದಿಗಳನ್ನು ಶೇರ್ ಮಾಡಿ ಮತ್ತು ಬೆಲ್ ಒತ್ತಿ ಸಬ್ ಸ್ಕ್ರೈಬ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button