Latest

ಬೆಟ್ಟಿಂಗ್: ಓರ್ವನ ಬಂಧನ, ಮತ್ತೋರ್ವ ಪರಾರಿ

ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ

ಚೆನ್ನೈ ಸುಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಲಿ ಮಾಡಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

Home add -Advt

ಖಾನಾಪೂರ ರಸ್ತೆಯ ಡಿ-ಮಾರ್ಟ ಹತ್ತಿರ ಎಸಿಪಿ ಮಹಾಂತೇಶ್ವರ ಜಿದ್ದಿ ತಂಡ  ದಾಳಿ ನಡೆಸಿ,  19,600 ರೂ ನಗದು ಹಾಗೂ ಒಂದು ಮೋಬೈಲ್  ವಶಪಡಿಸಿಕೊಂಡಿದೆ.  ಉದ್ಯಮಬಾಗ ಪಿಐ  ಎಸ್ ಸಿ ಪಾಟೀಲ ಹಾಗೂ ಬೆಳಗಾವಿ ನಗರ ಅಪರಾಧ ವಿಭಾಗದ ಸಿಬ್ಬಂದಿಗಳಾದ  ಅನೀಲ ಪಾಟೀಲ, ಐ. ಎಸ್ ಪಾಟೀಲ, ಶಿವಲಿಂಗ ಪಾಟೀಲ  ದಾಳಿ ನಡೆಸಿದ ತಂಡದಲ್ಲಿದ್ದರು.

ಖಾನಾಪುರ ನಾಯಕ ಗಲ್ಲಿಯ ಸಲ್ಮಾನ ನಿಯಾಜ ಬಡೆಗಾರ  ಎನ್ನುವವನನ್ನು ಬಂಧಿಸಲಾಗಿದೆ. ಮಜಗಾವಿಯ ಬೆಟ್ಟಿಂಗ್ ಬುಕ್ಕಿ ಪವನ ಕಾಕತಕರ  ಪರಾರಿ ಆಗಿದ್ದು,   ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button