ಪ್ರಗತಿವಾಹಿನಿ ಸುದ್ದಿ, ಗೋಕಾಕ:
‘ರೈತರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಪ್ರಭಾರಿ ಡೀನ್ ಡಾ. ಚಂದ್ರಶೇಖರ ಹಂಚಿನಮನಿ ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಕೃಷಿ ವಿಚಾರ ಸಂಕೀರ್ಣ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬೇಸಾಯ ಮಾಡುವುದರಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು ಎಂದರು.
ಬೆಳೆಗಳಿಗೆ ನೀರು ಎಷ್ಟು ಬೇಕು ಆ ಪ್ರಮಾಣದಲ್ಲಿ ನೀರು ಪೂರೈಸಬೇಕು. ಇಲ್ಲದಿದ್ದರೆ ಬೆಳೆಗಳು ಹಾನಿಯಾಗಿ ಇಳುವರಿ ಕಡಿಮೆಯಾಗುವುದು ಎಂದರು.
ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಧ್ಯಾಪಕ ಮತ್ತು ವಿಸ್ತರಣಾ ಅಧಿಕಾರಿ ಡಾ. ಕಾಂತರಾಜ ವಿ. ಮಾತನಾಡಿ ತೋಟಗಾರಿಕೆ ಬೆಳೆಗಳಲ್ಲಿ ಬೆಳಗಾವಿ ಜಿಲ್ಲೆಯು ಪ್ರಮುಖ ಸ್ಥಾನವಿದ್ದು, ಇಲ್ಲಿಯ ಮಣ್ಣು ಮತ್ತು ಹವಾಮಾನವು ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿದ್ದು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು.
ಹಳ್ಳೂರಿನ ಪ್ರಗತಿಪರ ರೈತ ಲಕ್ಷ್ಮಣ ಸಪ್ತಸಾಗರ ಕೃಷಿಯಲ್ಲಿಯ ತಮ್ಮ ಅನುಭವ ಹಂಚಿಕೊಂಡರು.
ಬೆಳಗಾವಿಯ ರಾಜಪ್ರಭು ದೋತ್ರೆ ಅವರ ಸಂಗೀತ ಗೋಷ್ಠಿಯು ಜನಮೆಚ್ಚುಗೆ ಗಳಿಸಿತು. ಅವರಿಗೆ ಮುಕುಂದ ಗೋರೆ ಮತ್ತು ಅಂಗದ ದೇಸಾಯಿ ಹಾಮೋನಿಯಂ, ತಬಲಾ ಸಾಥ್ ನೀಡಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಯಶೋಧಾ ಮರಬಸನ್ನವರ ನಿರೂಪಿಸಿದರು.
ಮಲ್ಲಕಂಬ: ಮೂಡಲಗಿಯ ಚೈತನ್ಯ ವಸತಿ ಆಶ್ರಮ ಶಾಲೆಯ ಮಕ್ಕಳು ಪ್ರದರ್ಶಿಸಿದ ಮಲ್ಲಕಂಬ ವಿವಿಧ ಕಸರತ್ತುಗಳು ಸೇರಿದ ಜನರನ್ನು ರೋಮಾಂಚನಗೊಳಿಸಿತು.
ನಾಳೆಯ ಕಾರ್ಯಕ್ರಮ: ಏ. 28ರಂದು ಸಂಜೆ 7.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ