ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿನ ಲೇಕ್ವ್ಯೂ ಆಸ್ಪತ್ರೆ ಮತ್ತು ಚಿದಂಬರ ನಗರದ ನಿವಾಸಿಗಳ ಸಹಕಾರದಿಂದ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ.
ಹೃದಯ ರೋಗ ತಜ್ಞ ಡಾ. ಪ್ರಭು ಹಳಕಟ್ಟಿ, ಎಲುಬು ಕೀಲು ತಜ್ಞ ಡಾ. ಬಸವರಾಜ ಪಾಟೀಲ, ಸ್ತ್ರೀ ರೋಗ ತಜ್ಞೆ ಡಾ. ಜಯಶ್ರೀ ಪಾಟೀಲ, ಬಂಜೆತನ ಮತ್ತು ಸೌಂದರ್ಯೀಕರಣ ತಜ್ಞೆ ಡಾ.ಶ್ವೇತಾ ಗಿರೀಶ್ ಸೋನವಾಲ್ಕರ ಮತ್ತು ಜನರಲ್ ಸರ್ಜರಿ ವಿಭಾಗದ ಡಾ. ಸುಧೀರ್ ಭಟ್ ಈ ಶಿಬಿರದಲ್ಲಿ ಚಿಕಿತ್ಸೆ ನೀಡಲಿದ್ದಾರೆ.
ಹೃದಯ ರೋಗ, ನರ ರೋಗ, ಎಲುಬು ಕೀಲು ಸೇರಿದಂತೆ ಸಕ್ಕರೆ, ಬಿಪಿ ಬಗ್ಗೆಯೂ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಪಿಆರ್ ಓ ಗಿರೀಶಕುಮಾರ ಖವಟಕೊಪ್ಪ, (7022007284) ಅಥವಾ ವಾಣಿ ಜೋಶಿ (7406180809) ಅವರನ್ನು ಸಂಪರ್ಕಿಸಲು ಕೋರಲಾಗಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ