ಪ್ರಗತಿವಾಹಿನಿ ಸುದ್ದಿ, ರಾಮದುರ್ಗ:
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ. ಮಹಾದೇವಪ್ಪ ಪಟ್ಟಣ ಅವರ ಧರ್ಮಪತ್ನಿ, ರಾಮದುರ್ಗ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ ಶಾರದಮ್ಮ ಎಂ. ಪಟ್ಟಣ (97) ಬುಧವಾರ ಬೆಳಿಗ್ಗೆ 9.30ಕ್ಕೆ ನಿಧನರಾಗಿದ್ದಾರೆ.
1967-1972 ರ ಅವಧಿಯಲ್ಲಿ ರಾಮದುರ್ಗ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ವಿಧಾನ ಸಭೆಯ ಮಾಜಿ ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿದಂತೆ ಇನ್ನಿಬ್ಬರು ಪುತ್ರರು. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.