ಪ್ರಗತಿವಾಹಿನಿ ಸುದ್ದಿ, ಅಗಸಗಿ ;
ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಹೊರವಲಯದಲ್ಲಿ ಎಮ್ಮೆ ಸಾಕಾಣಿಕೆಗೆ ಮಾಡಿರುವ ಶೇಡ್ (ಡೈರಿ ಫಾರ್ಮ) ನಲ್ಲಿರುವ ೨ ಎಮ್ಮೆಗಳನ್ನು ಕಳ್ಳತನ ಮಾಡಲಾಗಿದೆ. ರಾತ್ರಿ ೧ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಳ್ಳರನ್ನು ತಡೆಯಲ್ನೆತಿಸಿದ ಕಾವಲುಗಾರ ಅಪ್ಪಯ್ಯಾ ಶೇಲಾರ ಎಂಬುವನ ಬಾಯಿಗೆ ಅರಿವೆ ಹಾಕಿ, ಕೈ ಕಾಲು ಕಟ್ಟಿ , ಹಿಗ್ಗಾಮುಗ್ಗಾ ತಳಿಸಿರುವ ಕಳ್ಳರು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾವಾಗಾ ಹಗ್ಗ ಬಿಚ್ಚಿದ ಒಂದು ಎಮ್ಮೆ ಕಳ್ಳರ ನಿಯಂತ್ರಣಕ್ಕೆ ಬರದೆ ಜಿಗಿಯಲು ಆರಂಭಿಸಿದ ತಕ್ಷಣ ಕೈಗೆ ಸಿಕ್ಕ ೨ ಎಮ್ಮೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಶೆಡ್ ನಲ್ಲಿ ಎಮ್ಮೆ ಮತ್ತು ಆಕಳು ಸೇರಿ ಸುಮಾರು ೧೦ ದನಗಳಿದ್ದು , ಲಕ್ಷಾಂತ ರೂ. ಬೆಲೆ ಬಾಳುವ ಮುರ್ರಾ ಜಾತಿಯ ಎಮ್ಮೆಗಳು.
ಕಳೆದ ೮ ತಿಂಗಳ ಹಿಂದೆ ಈ ದನದ ಕೊಟ್ಟಿಗೆಯನ್ನು ಕಟ್ಟಿದ್ದು ಹೊರ ರಾಜ್ಯಗಳಿಂದ ನಾನಾ ತಳಿಯ ಲಕ್ಷಕ್ಕೂ ಹೆಚ್ಚು ಮೊತ್ತದ ಎಮ್ಮೆಗಳನ್ನು ತರಲಾಗಿತ್ತು. ಖಾಸಗಿ ಉದ್ಯೋಗಿಯಾಗಿದ್ದ ಪ್ರಿಯಾ ಪುಂಡಲಿಕ ಸೋಮನಟ್ಟಿ ಎಂಬುವರು ಹೈನುಗಾರಿಕೆ ಮಾಡುವ ಹಂಬಲದಿಂದ ಗ್ರಾಮದಲ್ಲಿ ಬಾಡಿಗೆ ರೂಪದಲ್ಲಿ ಜಮೀನು ಪಡೆದು ಡೈರಿ ಫಾರ್ಮ ಮಾಡಲು ಮುಂದಾಗಿದ್ದರು.
ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಹಳ್ಳಿಗಳಲ್ಲಿ ಬೆಸಿಗೆಯ ಸಂದರ್ಭದಲ್ಲಿ ದನಕರುಗಳನ್ನು ಹೊಲದಲ್ಲಿ ಕಟ್ಟುವುದು ಸರ್ವೆ ಸಾಮಾನ್ಯ. ಇದರಿಂದಾಗಿ ಹೊಲಗಳಲ್ಲಿ ವಾಸವಾಗಿರುವ ಜನ ಅದರಲ್ಲೂ ಮಹಿಳೆಯರು ಭಯಭೀತರಾಗಿದ್ದಾರೆ. ಈ ಘಟನೆ ಅಗಸಗಿ ಮಾತ್ರ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಅಗಸಗಿ ಗ್ರಾಮದಲ್ಲಿ ಈ ಹಿಂದೆ ದನಗಳ ಕಳ್ಳತನ ನಡೆದಿತ್ತು. ಆದರೆ ಈ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಇದೇ ಮೊದಲಾಗಿದೆ.
ಈ ಪ್ರಕರಣ ಸಂಬಂಧಿಸಿದಂತೆ ಕಾಕತಿ ಪೋಲಿಸ್ ಸಿಪಿಐ ಗೌಂಡಿ, ಪಿ ಎಸ್ ಐ ಅರ್ಜುನ ಹಂಚಿನಮನಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ