Latest

ಮೌಲ್ಯಗಳಿಂದ ವ್ಯಕ್ತಿಯ ಬದುಕು ಸುಂದರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಯುವಜನರಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ರಾಜಕೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವ್ಯಕ್ತಿತ್ವ ನಿರ್ಮಾಣದಲ್ಲಿ ಮೌಲ್ಯಗಳು ವ್ಯಕ್ತಿಯ ಬದುಕನ್ನು ಸುಂದರ ಗೊಳಿಸುತ್ತವೆ ಎಂದು ಬ್ರಹ್ಮಕುಮಾರಿ ವಿದ್ಯಾ ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಎನ್.ಜಿ. ಬಟ್ಟಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಾನಂದ, ಅನ್ನಪೂರ್ಣಾ, ಪ್ರೊ.ಬಿ.ಐ. ಮಿಡಕನಟ್ಟಿ, ಪ್ರೊ.ಎಸ್.ಜಿ. ಚಿನಿವಾಲ, ಪ್ರೊ.ಆರ್.ವಿ. ಅಕ್ಕಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಲಕ್ಷ್ಮಿ ಬುರಲಕಟ್ಟಿ ನಿರೂಪಿಸಿದರು. ಅಪರ್ಣಾ ದಳವಿ ಸ್ವಾಗತಿಸಿದರು. ಈರಣ್ಣಾ ದಾಸ್ತಿಕೊಪ್ಪ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button