Latest

ರಾಮತೀರ್ಥ ನಗರ ಕಸ ವಿಲೇವಾರಿಗೆ ಕ್ರಮ : ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಳೆದ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮತೀರ್ಥ ನಗರ ಕಸ ವಿಲೇವಾರಿ ಕಾರ್ಯಕ್ಕೆ ಶಾಸಕ ಅನಿಲ ಬೆನಕೆ ಮಂಗಳವಾರ ಚಾಲನೆ ನೀಡಿದರು.
ರಾಮತೀರ್ಥ ನಗರ ಕಳೆದ ೧೦ ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಿಸುತ್ತಿದೆ. ಇನ್ನು ಮುಂದೆ ಪ್ರತಿ ಎರಡು ದಿನಗಳಿಗೊಮ್ಮೆ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬುಡಾ ಅಧಿಕಾರಿಗಳಿಗೆ ಬೆನಕೆ ಸೂಚಿಸಿದರು.
ರಾಮತೀರ್ಥ ನಗರದ ರಹವಾಸಿಗಳು ಸಹ ಕಸವನ್ನು ಗಟಾರು ಹಾಗೂ ಇನ್ನಿತರ ಸ್ಥಳದಲ್ಲಿ ಎಸೆಯದೆ ಎರಡು ದಿನಗಳಿಗೊಮ್ಮೆ ಕಸವನ್ನು ಸಂಗ್ರಹಿಸಿ ಕಸ ಎತ್ತಲು ಮನೆ ಮನೆಗೆ ಬರುವ ವಾಹನದಲ್ಲಿ ಹಾಕಬೇಕು ಎಂದು ಶಾಸಕ ಬೆನಕೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬುಡಾ ಅಭಿಯಂತರ ಹಿರೇಮಠ, ರಾಮತೀರ್ಥ ನಗರದಲ್ಲಿ ಎರಡು ದಿನಕೊಮ್ಮೆ ಮನೆ ಮನೆಯಿಂದ ಕಸ ಸಂಗ್ರಹಿಸಿ ಪ್ರದೇಶವನ್ನು ಸುಂದರವಾಗಿಡಲಾಗುವುದು ಎಂದರು.
ವಿಲಾಸ ಕೆರೂರ, ಎಸ್.ಎಸ್. ಕಿವಡಸನ್ನವರ, ಎನ್.ಬಿ. ನಿರ್ವಾಣಿ, ರಾಜು ಪಾಟೀಲ, ವಿಜಯಕುಮಾರ ಹೊಸಟ್ಟಿ ಹಾಗೂ ರಾಮತೀರ್ಥ ನಗರದ ನಿವಾಸಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button