ನಿಪ್ಪಾಣಿ: ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿನಗರ ಹೊರವಲಯದಲ್ಲಿ ನಿರ್ಮಿಸಿದ ಮನೆಗಳನ್ನು ಶುಕ್ರವಾರ ಇಲ್ಲಿನ ರಾಜಾ ಶಿವಛತ್ರಪತಿ ಸಾಂಸ್ಕೃತಿಕ ಭವನದಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಲಾಟರಿ ಡ್ರಾ ಮೂಲಕ ಪಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಶಶಿಕಲಾ ಜೋಲ್ಲೆ, ಪ್ರತಿಯೊಂದು ಸಾಮಾನ್ಯ ಕುಟುಂಬಕ್ಕೂ ತಮ್ಮದೆ ಆದ ಸ್ವಂತದ್ದೊAದು ಮನೆ ಇರಬೇಕೆಂದು ವ್ಯಕ್ತಿಯ ಜೀವನದ ಮಹತ್ವದ ಕನಸಾಗಿರುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ನಿಪ್ಪಾಣಿಯ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರ ಕನಸು ಈಗ ನನಸಾಗುತ್ತಿದ್ದು, ಅವರಿಗೆ ಹಕ್ಕಿನ ಮನೆಯನ್ನು ಒದಗಿಸುವ ಕಾರ್ಯದಲ್ಲಿ ಆಶ್ರಯ ಸಮೀತಿ ಅದ್ಯಕ್ಷೆಯಾಗಿ ನನ್ನ ಕೊಡುಗೆ ಇರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಿಪಾಣಿ ಹೂರವಲಯದ ಪಟ್ಟಣಕುಡಿ ಗ್ರಾಮದ ಬಳಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಒಟ್ಟು 1812 ಮನೆಗಳ ಮಹತ್ವಾಕಾಂಕ್ಷಿ ವಸತಿ ಯೋಜನೆಯಲ್ಲಿ ಈಗಾಗಲೆ 800 ಮನೆಗಳು ವಾಸಿಸಲು ಯೋಗ್ಯವಾಗಿದ್ದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ 15 ದಿನಗಳೊಳಗಾಗಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ವಿದ್ಯುತ್ ಮೀಟರ್ ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವದು. ಕೇವಲ ಮನೆಗಳನ್ನು ಒದಗಿಸುವುದ?ೆ್ಟÃ ಅಲ್ಲದೆ, ಈ ವಸತಿ ಸಮುಚ್ಚಯದಲ್ಲಿ ವಾಸಿಸುವ ನಿವಾಸಿಗಳು ತಮ್ಮ ಮನೆಗಳಿಂದಲೇ ಸಣ್ಣ ಕೈಗಾರಿಕೆ ಹಾಗೂ ಸ್ವಂತ ಉದ್ಯಮಗಳನ್ನು ನಡೆಸಲು ಅನುಕೂಲವಾಗುವಂತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದರು.
ಮನೆಗಳನ್ನು ಯಾವುದೇ ಪಕ್ಷಪಾತ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಎಲ್ಲರ ಸಮ್ಮುಖದಲ್ಲಿ ಪಾರದರ್ಶಕ ಲಾಟರಿ ಪದ್ಧತಿಯ ಮೂಲಕ ಹಂಚಿಕೆ ಮಾಡಲಾಗಿದೆ. ಇನ್ನು ಮುಂದೆಯೂ ಮನೆಗಳ ಅಗತ್ಯವಿರುವ ನಾಗರಿಕರು ಅರ್ಹ ದಾಖಲೆಗಳೊಂದಿಗೆ ನಗರಸಭೆ ಕಚೇರಿ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕಿಸಬೇಕೆAದರು.
ಪಾರದರ್ಶಕವಾಗಿ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಯಿತು. ಬಹುದಿನಗಳಿಂದ ಸ್ವಂತ ಮನೆಯ ನಿರೀಕ್ಷೆಯಲ್ಲಿದ್ದ ಬಡ ಫಲಾನುಭವಿಗಳು ತಮ್ಮ ಹೆಸರು ಕೂಗುತ್ತಿದ್ದಂತೆ ಸಂತಸ ವ್ಯಕ್ತ ಪಡಿಸಿದರು
ತಹಶೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿಯೇ ನಿಪ್ಪಾಣಿಯಲ್ಲಿ ಇ?ÀÄ್ಟ ಬೃಹತ್ ಪ್ರಮಾಣದ ವಸತಿ ಯೋಜನೆ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಫಲಾನುಭವಿಗಳ ಆಯ್ಕೆಗಾಗಿ ನಡೆಸಲಾಗುತ್ತಿರುವ ಲಾಟರಿ ಪ್ರಕ್ರಿಯೆಯನ್ನು ಎಲ್ಲರ ಸಮ್ಮುಖದಲ್ಲಿ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಯಾವುದೇ ಫಲಾನುಭವಿಗೆ ಅನ್ಯಾಯವಾಗದಂತೆ ಆಡಳಿತ ಮಂಡಳಿಯಿAದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಸಂಪೂರ್ಣ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಾಲಕಿಯಿಂದ ಚೀಟಿ ಎತ್ತುವದರ ಮೂಲಕ ಮನೆ ಹಂಚಿಕೆ:
ಬಾಲಕಿಯೊಬ್ಬಳಿAದ ಮೊದಲ ಚೀಟಿಯನ್ನು ಎತ್ತಿಸುವ ಮೂಲಕ ಲಾಟರಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಂತರ ಆಯ್ಕೆಯಾದ ಫಲಾನುಭವಿಗಳ ಹೆಸರುಗಳನ್ನು ಘೋಷಿಸಲಾಯಿತು. ಎಲ್ಲಾ 800 ಪಲಾನುಭವಿಗಳಿಗೆ ನಿರಂತರವಾಗಿ ಬೇರೆ ಬೇರೆ ಮಹಿಳೆಯರಿಂದ ಚೀಟಿ ತೆಗೆದು ಅಬರವರನೆ ನಂಬರಗಳನ್ನು ನೀಡಲಾಯಿತು
ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಶಿಸ್ತು ಹಾಗೂ ಭದ್ರತೆಯನ್ನು ಕಾಪಾಡಲು ಆಡಳಿತ ಮಂಡಳಿಯಿAದ ವಿಶೇ?À ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮನೆ ಹಂಚಿಕೆಯಲ್ಲಿ ಈ ಹಿಂದೆ ನಡೆದ ರಾಜಕೀಯ ಗುದ್ದಾಟ ಮತ್ತು ಕೆಲ ಘಟನೆಗಳನ್ನು ಗಮದಲ್ಲಿಟ್ಟು ಕಾರ್ಯಕ್ರಮದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಭಾಂಗಣದೊಳಗೆ ಸಂಬAಧಪಟ್ಟ ಫಲಾನುಭವಿಗಳು, ಆಶ್ರಯ ಸಮಿತಿ ಪದಾಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.
ನಗರಸಭೆ ಆಯುಕ್ತ ಗಣಪತಿ ಪಾಟೀಲ, ಸಿಪಿಐ ಬಿ.ಎಸ್ ತಳವಾರ ಉಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



