Kannada NewsLatestNational

ಮಣಿಪುರದ ವಿದ್ಯಾರ್ಥಿಗಳ ಕೊಲೆ ಹಿನ್ನೆಲೆ; ನಾಲ್ವರು ಮಹಿಳೆಯರ ಬಂಧನ

ಪ್ರಗತಿ ವಾಹಿನಿ ಸುದ್ದಿ. ಇಂಫಾಲ್ : ಇಂಫಾಲ್‌ನ ಇಬ್ಬರು ವಿದ್ಯಾರ್ಥಿಗಳ ನಾಪತ್ತೆ ಮತ್ತು ಶಂಕಿತ ಹತ್ಯೆಗಾಗಿ ಸಿಬಿಐ ಪ್ರಮುಖ ಆರೋಪಿಯ ಪತ್ನಿ ಮತ್ತು ಇನ್ನೊಬ್ಬ ಮಹಿಳೆ ಸೇರಿದಂತೆ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಿದೆ ಮತ್ತು ಇಬ್ಬರು ಅಪ್ರಾಪ್ತರನ್ನು ಭಾನುವಾರ ಚುರಾಚಂದ್‌ಪುರದ ಹೆಂಗ್ಲೆಪ್ ಪ್ರದೇಶದಲ್ಲಿ ಬಂಧಿಸಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ 17 ವರ್ಷದ ಬಾಲಕಿ ಹಿಜಾಮ್ ಲಿಂತೋಯಿಂಗಂಬಿ ಮತ್ತು 20 ವರ್ಷದ ಯುವಕ ಫಿಜಾಮ್ ಹೇಮ್‌ಜಿತ್ ಸಿಂಗ್ ನಾಪತ್ತೆಯಾಗಿದ್ದು, ಈ ವಾರ ಇಂಫಾಲ್ ಕಣಿವೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಸೇರಿದ ಎರಡು ಶವಗಳ ಚಿತ್ರಗಳು, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಭಾರೀ ಪ್ರತಿಭಟನೆಗಳು ನಡೆದವು. ಪ್ರತಿಭಟನಾಕಾರರು ಸಿಎಂ ಎನ್ ಬಿರೇನ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಮೇ 3 ರಿಂದ ಸುದೀರ್ಘವಾದ ಪಂಥೀಯ ಕಲಹದ ಹಿಡಿತದಲ್ಲಿರುವ ರಾಜ್ಯದಲ್ಲಿ ಈ ಘಟನೆಯಿಂದಾಗಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಿತು, 175 ಕ್ಕೂ ಹೆಚ್ಚು ಜನರು ಅಸುನೀಗಿದ್ದಲ್ಲದೇ ನೂರಾರು ಜನರು ಗಾಯಗೊಂಡಿದ್ದಾರೆ.

Home add -Advt

Related Articles

Back to top button