Latest

ವಾಟ್ಸಪ್ ಡಿಪಿ ಶ್ರೀಗಳಿಗೆ ಅರ್ಪಣೆ, ಸಾಮಾಜಿಕ ಜಾಲತಾಣ ತುಂಬ ಶ್ರೀಗಳದ್ದೇ ಸುದ್ದಿ

 

ವಾಟ್ಸಪ್ ನಲ್ಲಿ ವೈರಲ್ ಆಗಿರುವ ಸಿದ್ದಗಂಗಾ ಶ್ರೀಗಳ ಅಪರೂಪದ ಚಿತ್ರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸೋಮವಾರ ಮಧ್ಯಾಹ್ನ ತುಮಕೂರಿನ ಸಿದ್ದಗಂಗಾಮಠದ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ಹೊರಬೀಳುತ್ತಿದ್ದಂತೆ ಭಕ್ತರ ವಾಟ್ಸಪ್ ಗಳ ಡಿಪಿ ಬದಲಾಗತೊಡಗಿತು. ವಯಕ್ತಿಕ ಅಲ್ಲದೆ, ಗ್ರುಪ್ ಗಳ ಡಿಪಿಗಳೂ ಶ್ರೀಗಳನ್ನೇ ತುಂಬಿಕೊಂಡವು. 

Home add -Advt

ಸಾಮಾಜಿಕ ಜಾಲತಾಣಗಳ ತುಂಬು ಶ್ರೀಗಳ ಜೀವನ-ಸಾಧನೆ ಸಾರುವ ಸುದ್ದಿ, ಮಾಹಿತಿ, ಲೇಖನ, ಕವನ, ಚಿತ್ರಗಳೇ ತುಂಬಿಕೊಂಡಿವೆ. ಎಲ್ಲಿ ನೋಡಿದಲ್ಲಿ ಶ್ರೀಗಳದ್ದೇ ಮಾತು. ವಿಶೇಷವೆಂದರೆ ಟಿವಿ ಚಾನೆಲ್ ಗಳು ಹಾಗೂ ಮಂಗಳವಾರದ ದಿನಪತ್ರಿಕೆಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಶ್ರೀಗಳ ಮಾಹಿತಿ ಪ್ರಕಟಿಸಿದ್ದರೆ, ಡಿಜಿಟಲ್ ಮೀಡಿಯಾಗಳು ಕೂಡ ತಾವೇನು ಕಡಿಮೆಯಿಲ್ಲ ಎನ್ನುವಂತೆ ಓದಿ ಮುಗಿಯಲಾಗದಷ್ಟು ಶ್ರೀಗಳ ಮಾಹಿತಿಯನ್ನು ನೀಡಿವೆ. 

ಒಟ್ಟಾರೆ ಕಳೆದ ಎರಡು ದಿನಗಳಿಂದಲೂ ಎಲ್ಲ ಮಾಧ್ಯಮಗಳೂ ತಮ್ಮನ್ನು ಶ್ರೀಗಳಿಗೇ ಅರ್ಪಿಸುವ ಮೂಲಕ ಮಾಧ್ಯಮ ಲೋಕದಲ್ಲೊಂದು ಹೊಸ ಇತಿಹಾಸವನ್ನೇ ನಿರ್ಮಿಸಿವೆ. 

Related Articles

Back to top button