
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒತ್ತಡ ಕಡೆಮೆಗೊಳಿಸುವ ನೆಪ ಇಟ್ಟುಕೊಂಡು ವಿಶ್ವವಿದ್ಯಾಲಯವನ್ನು ವಿಭಜಿಸುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರಕಾರದ ನಿರ್ಣಯ ಖಂಡನೀಯ. ಕೂಡಲೇ ಈ ನಿರ್ಣಯ ರದ್ದು ಪಡೆಸಬೇಕೆಂದು ಕರ್ನಾಟಕ ನವ ನಿರ್ಮಾಣ ಪಡೆ ಅಧ್ಯಕ್ಷ ರಾಜಕುಮಾರ ಟೋಪಣ್ಣವರ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿಯಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಯಾಗಬೇಕು. ಹಾಸನ, ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳು ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ವಿಟಿಯು ತಾಂತ್ರಿಕ ವಿವಿ ವಿಂಗಡನೆ ಮಾಡಿ ಹಾಸನದಲ್ಲಿ ಸ್ಥಾಪನೆ ಮಾಡುವ ನಿರ್ಣಯ ಸರಿಯಲ್ಲ, ಇದು ಉತ್ತರ ಕರ್ನಾಟಕದ ಅಭಿವೃದ್ಧಿ ವಿರೋಧಿ ನಿರ್ಣಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಟಿಯು ಒತ್ತಡ ಕಡಿಮೆ ಮಾಡುವ ಸಲುವಾಗಿ ವಿಂಗಡನೆ ಮಾಡುವುದಾದರೆ, ಅದೇ ರೀತಿ ಬೆಂಗಳೂರಿನಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ವಿಂಗಡನೆ ಮಾಡಿ ಬೆಳಗಾವಿಗೆ ಸ್ಥಳಾಂತರ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು ನಗರವು ಕನ್ನಡಿಗರ ಹೆಮ್ಮೆಯಾಗಿದೆ. ಎಲ್ಲ ಸರಕಾರಗಳು ಇಲ್ಲಿ ಒತ್ತು ನೀಡುವ ಕಾರಣ ಅಂತರಾಷ್ಟಿಯ ಮಟ್ಟದ ಐಟಿ ಹಬ್‌ಗಳಾಗಿವೆ. ಈಗ ಬೆಂಗಳೂರು ಗಾರ್ಡನ್ ಸಿಟಿಯಿಂದ ಕಾಂಕ್ರೆಟ್ ನಗರವಾಗಿ ಪರಿವರ್ತನೆಯಾಗುತ್ತಿದೆ. ಇಲ್ಲಿನ ಕೆರೆಗಳು ಹಾಳಾಗಿವೆ, ಟ್ರಾಪಿಕ್ ಸಮಸ್ಯೆ ಹೆಚ್ಚಾಗಿದೆ, ಜನ ಸಂಖ್ಯಾ ಸ್ಪೊಟವಾಗಿದೆ. ಆದ್ದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು, ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸಿ ಬೆಂಗಳೂರಿನ ನವೀಕರಣಕ್ಕೆ ನೀಡಿದ 8000 ಕೋಟಿ ಅನುದಾನದಲ್ಲಿ ಕನಿಷ್ಠ 4000 ಕೋಟಿ ಅನುದಾನವನ್ನು ಬೆಳಗಾವಿ ನವೀಕರಣಕ್ಕೆ ನೀಡಬೇಕು ಎಂದರು.
ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಒಬ್ಬರ ಬಾಯಿಂದ ಕಿತ್ತುಕೊಂಡು ಮತ್ತೊಬ್ಬರಿಗೆ ನೀಡುವುದು ಅಭಿವೃದ್ಧಿಯಲ್ಲ, ದೋಸ್ತಿ ಸರಕಾರ ಬೆಳಗಾವಿ ಜನರಿಗೆ ಮಾಡುತ್ತಿರುವ ಅನ್ಯಾಯ, ಕೂಡಲೇ ಸರಕಾರ ವಿಟಿಯು ವಿಂಗಡನೆ ನಿರ್ಣಯ ಕೈ ಬೀಡಬೇಕು, ಇಲ್ಲವಾದರೆ ಬೆಂಗಳೂರಿನಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ