Latest

ವ್ಯಾಯಾಮ ಶಾಲೆ, ಬಸ್ ತಂಗುದಾಣ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ನಗರದ ಕಡೋಲಕರ ಗಲ್ಲಿಯಲ್ಲಿ ಯುವಕರು ಹಾಗೂ ರಹವಾಸಿಗಳ ಬೇಡಿಕೆಯ ಮೇರೆಗೆ ನಿರ್ಮಿಸಲಾದ ವ್ಯಾಯಾಮ ಶಾಲೆಯನ್ನು ಶಾಸಕ ಅನಿಲ ಬೆನಕೆ ಹಾಗೂ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ, ಕಡೋಲಕರ ಗಲ್ಲಿ ನಿವಾಸಿಗಳ ಬಹಳ ದಿನಗಳ ಆಸೆಯಂತೆ ನಗರ ಸೇವಕಿ ಮಾಯಾ ಕಡೋಲಕರ ಅವರ ಅನುದಾನದಲ್ಲಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಯುವಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.

ನಗರದ ಕಾಲೇಜು ರಸ್ತೆಯಲ್ಲಿ ಮಹಾನಗರ ಪಾಲಿಕೆಯ ೧೪ನೇ ಹಣಕಾಸು ಅನುದಾನದಲ್ಲಿ ನಿರ್ಮಿಸಲಾದ ಸಿಟಿ ಬಸ್ ನಿಲ್ದಾಣವನ್ನು ಸಹ ಶಾಸಕ ಅನಿಲ ಬೆನಕೆ ಹಾಗೂ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಉದ್ಘಾಟಿಸಿದರು. ಮಾಜಿ ಮಹಾಪೌರ ಸಂಜೋತಾ ಬಾಂದೇಕರ, ಅಧಿಕಾರಿಗಳು, ಸ್ಥಳಿಯರು ಇದ್ದರು.

Related Articles

Back to top button