ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಹಿರಿಯ ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯೆಲ್ ದಂಪತಿಯ ಜೀವನ ಸಾಧನೆ ಆಧರಿಸಿದ ಪುಸ್ತಕ ಐಎಎಸ್ ದಂಪತಿಯ ಕನಸು ಪುಸ್ತಕದ ಆಂಗ್ಲೀಷ್ ಆವೃತ್ತಿ ಸಿದ್ಧವಾಗಿದೆ.
ಶುಕ್ರವಾರ ಮೊದಲ ಪುಸ್ತಕವನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಶಾಲಿನಿ ರಜನೀಶ್ ನೀಡಿದರು. ವಿಜಯ ಭಾಸ್ಕರ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ಪುಸ್ತಕ ಕನ್ನಡದಲ್ಲಿ 2015ರಲ್ಲಿ ಪ್ರಕಟವಾಗಿದ್ದು, ಇದೇ ವಿಷಯ ಆಧರಿತ ಸಿನೇಮಾ ಶಾಲಿನಿ ಐಎಎಸ್ ಕೂಡ ನಿರ್ಮಾಣವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ