Latest

ಸಚಿವ ಡಿ.ಕೆ.ಶಿವಕುಮಾರ್ ಗೆ ಬಿಗಿಯಾಗುತ್ತಿದೆ ಐಟಿ ಉರುಳು

 

 

     ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರಾಜ್ಯ ಜಲಸಂಪನ್ಮೂಲ ಮತ್ತು ಉನ್ನತ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದಿನದಿಂದ ದಿನಕ್ಕೆ ಐಟಿ ಉರುಳು ಬಿಗಿಯಾಗತೊಡಗಿದೆ.

ಕಳೆದ ಒಂದು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಶಿವಕುಮಾರ ಅವರ ಆಸ್ತಿಗಳ ತನಿಖೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ, ಶಿವಕುಮಾರ ಬಳಿ ಸಾವಿರಾರು ಕೋಟಿ ರೂ. ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈಚೆಗಷ್ಟೆ ಶಿವಕುಮಾರ ಅವರ ತಾಯಿಯ ವಿಚಾರಣೆಯನ್ನು ಕೂಡ ನಡೆಸಲಾಗಿತ್ತು. 

ಶಿವಕುಮಾರ ಅವರು ಘೋಷಿಸಿರುವ ಆಸ್ತಿಗಳಿಗೂ ಆದಾಯಕ್ಕೂ ತಾಳೆಯಾಗುತ್ತಿಲ್ಲ. ಜೊತೆಗೆ ಹಲವಾರು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿಗಳೂ ಪತ್ತೆಯಾಗಿವೆ. ಈ ಬೇನಾಮಿ ಆಸ್ತಿಗಳನ್ನು ಯಾವುದೇ ಕ್ಷಣದಲ್ಲಿ ವಶಪಡಿಸಿಕೊಳ್ಳಬಹುದು. ಜೊತೆಗೆ ಅವರನ್ನು ಬಂಧಿಸಲೂಬಹುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಕುಮಾರ ವಿರುದ್ಧ ನಡೆಯುತ್ತಿರುವ ಆದಾಯ ತೆರಿಗೆ ದಾಳಿ ಮತ್ತು ತನಿಖೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಪ್ರಸ್ತುತ ಸರಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದು, ಒಂದು ವೇಳೆ ಬಂಧನವಾದರೆ ದೊಡ್ಡ ಕೋಲಾಹಲ ಸೃಷ್ಟಿಯಾಗಬಹುದು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button