ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಇತ್ತೀಚಿಗೆ ಸಾವಿಗೀಡಾದ ನಮ್ಮ ಕಾರ್ಯಕರ್ತ ಶಿವು ಉಪ್ಪಾರನ ತನಿಖೆಯನ್ನು ಪಾರದರ್ಶಕವಾಗಿ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ೧೯ ವರ್ಷದ ಒಬ್ಬ ಯುವ ಗೋ ರಕ್ಷಕನ ಸಾವು ಆತ್ಮಹತ್ಯೆಯಲ್ಲ ಅದೊಂದು ವ್ಯವಸ್ಥಿತ ಕೊಲೆ ಎಂಬ ಸಂದೇಹ ನಮ್ಮೆಲ್ಲರನ್ನೂ ಕಾಡುತ್ತಿದೆ. ಹಿಂದೂ ಕಾರ್ಯಕರ್ತರ ಸಾವಾದಾಗಲೆಲ್ಲ ಆ ಸಾವಿಗೆ ಆತ್ಮಹತ್ಯೆ ಎಂಬ ಹಣೆಪಟ್ಟಿ ಕಟ್ಟಿ ಹಿಂದೂ ವಿರೋಧಿ ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಇಲಾಖೆಯಿಂದ ಈ ಸಾವಿನ ತನಿಖೆಯಲ್ಲಿ ನ್ಯಾಯ ಸಿಗುವ ನಿರೀಕ್ಷೆ ನಮಗಿಲ್ಲ ಹಾಗಾಗಿ ಈ ಸಾವಿನ ತನಿಖೆಯನ್ನು ಸಿ ಬಿ ಐ ಗೆ ವಹಿಸುವಂತೆ ಮನವಿ ಮಾಡಲಾಯಿತು.ಹುಲ್ಲೋಳಿಯ ಶಿವಾನಂದ ಮಠದ ಶ್ರೀಗಳಾದ ಕೈವಲ್ಯಾನಂದ ಸ್ವಾಮೀಜಿ, ಬೆಳಗಾವಿಯ ಬಾಪಟ್ ಗಲ್ಲಿಯ ಶ್ರೀ ನಾಗನಾಥ ಸ್ವಾಮೀಜಿ, ವಿ ಹಿಂ ಪ ನ ಉತ್ತರ ಪ್ರಾಂತ್ಯ ಕೋಶಾಧ್ಯಕ್ಷರಾದ ಕೃಷ್ಣ ಭಟ್, ಭಜರಂಗದಳದ ಜಿಲ್ಲಾ ಸಂಯೋಜಕ ಭಾವುಕಣ್ಣ ಲೋಹಾರ, ಬಿ ಜೆ ಪಿ ಯುವ ಮೋರ್ಚಾ ಪ್ರಧಾನ್ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ