Latest

 ಸೋಮವಾರ ಡಾ.ಪಾಟೀಲ ಪುಟ್ಟಪ್ಪ ಜನ್ಮ ಶತಮಾನೋತ್ಸವ

 

 

   ಪ್ರಗತಿವಾಹಿನಿ ಸುದ್ದಿ, ಧಾರವಾಡ
ಹಿರಿಯ ಪತ್ರಕರ್ತ, ಕನ್ನಡ ಕಾವಲು ಸಮಿತಿಯ ಮಾಜಿ ಅಧ್ಯಕ್ಷ, ಮಾಜಿ ಸಂಸದ  ಡಾ.ಪಾಟೀಲ ಪುಟ್ಟಪ್ಪ ಅವರಿಗೆ ನೂರು ವರ್ಷ ತುಂಬುತ್ತಿದ್ದು, ಅವರ ಜನ್ಮ ಶತಮಾನೋತ್ಸವ ಸಮಾರಂಭ ಇದೇ ಸೋಮವಾರ ನಡೆಯಲಿದೆ.
ನಡೆದಾಡುವ ವಿಶ್ವವಿದ್ಯಾಲಯ ಎಂದೇ  ಕರೆಯಲ್ಪಡುವ ಪಾಪು ನೇರನುಡಿ, ದಿಟ್ಟ ನಡೆಗೆ ಹೆಸರಾದವರು. ಧಾರವಾಡ ಬಳಿಯ ಸತ್ತೂರಿನ ಡಾ.ವಿರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಅವರ ಅಭಿಮಾನಿಗಳು ಜ.14ರಂದು ಮುಂಜಾನೆ 10 ಗಂಟೆಗೆ ಜನ್ಮ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿದ್ದಾರೆ.
   ತೋಂಟದಾರ್ಯ ಸಂಸ್ಥಾನಮಠದ  ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಮ್ ಸಿದ್ದರಾಮಯ್ಯ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ರಕ್ಷಣಾ ಸಚಿವ ಶರದ ಪವಾರ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು ಆಹ್ವಾನಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button