Latest

ಹುಕ್ಕೇರಿ ಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಗುರುವಾರ ದಿನ ಕಾಶ್ಮೀರ ಕಣವಿಯಲ್ಲಿ ನಡೆದಿರುವ ಭಯೋತ್ಪಾದನೆಯ ಹೇಯ ಕೃತ್ಯವನ್ನು ಖಂಡಿಸಿ ಇಂದು ಹುಕ್ಕೇರಿ ನಗರದ ವ್ಯಾಪಾರಸ್ಥರು,ಶಾಲಾ ಕಾಲೇಜಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ನಾಗರಿಕರು ಪ್ರತೀಭಟನಾ ರ್ಯಾಲಿ ನಡೆಸಿದರು‌.
ಪಟ್ಟಣದ ಅಡವಿಸಿದ್ದೇಶ್ವರ ಮಠದ ಆವರಣದಿಂದ ಪ್ರಾರಂಭಗೊಂಡು ರ್ಯಾಲಿ ಬಜಾರ ರಸ್ತೆ ಮೂಲಕ ಹಾದು ಕೋರ್ಟ ಸರ್ಕಲ್ ದಲ್ಲಿ ಜಮಾಗೊಂಡು ಉಗ್ರರ ವಿರುದ್ದ ಮತ್ತು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ದೇಶದ ವಿರುದ್ದ ಘೋಷಣೆ ಕೂಗಿದರು.
ಮಾಧ್ಯಮಗಳ ಜೋತೆ ಮಾತನಾಡಿದ ಪ್ರತಿಭಟನಾಕಾರರು ಹಲವಾರು ವರ್ಷಗಳಿಂದ ಪಾಕಿಸ್ತಾನ ಉಗ್ರ ಸಂಘಟನೆಗಳು ದೇಶದ ಸೈನಿಕರ ಮೇಲೆ ಹಾಗೂ ಭಾರತದ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ.ಇದರ ಪರಿಣಾಮ ಸೈನಿಕರು ಜೀವ ಕಳೆದುಕೋಳ್ಳುತ್ತಿದ್ದಾರೆ. ಅಲ್ಲದೆ ಅವರನ್ನು ನಂಬಿಕೊಂಡು ಜೀವನ ಸಾಗಿಸುವ ಕುಟುಂಬಗಳು ಸಹ ಕಣ್ಣಿರಿನಲ್ಲಿ ಕೈ ತೋಳೆಯುವಂತಾಗುತ್ತಿದೆ ,ಉಗ್ರಗಾಮಿಗಳ ಸಂಘಟನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಎಂಬುವದು ಬಹಿರಂಗವಾದ ಸಂಗತಿಯಾಗಿದ್ದರೂ ಪ್ರಪಂಚದ ಇತರೆ ದೇಶಗಳು ಕೈ ಕಟ್ಟಿ ಕುಳಿತಿವೆ ಹೊರತು ಪಾಕಿಸ್ತಾನದ ಮೇಲೆ ದಿಟ್ಟ ನಿರ್ಧಾರ ಕೈಕೋಳ್ಳುತ್ತಿಲ್ಲಾ ವೆಂದು ಆಕ್ರೋಶ ವ್ಯಕ್ತಪಡಿಸಿ ತಹಸಿಲ್ದಾರ ಕಿರಣ ಬೆಳವಿ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ವಿಜಯ ರವದಿ, ಸೋಮಶೇಖರ ಮಠಪತಿ, ಅರವಿಂದ ಕುಲಕರ್ಣಿ, ನ್ಯಾಯವಾದಿ ರಾಮಚಂದ್ರ ಜೋಶಿ, ಜಯಗೌಡಾ ಪಾಟೀಲ, ಚಂದು ಗಂಗಣ್ಣವರ, ಉದಯ ಹುಕ್ಕೇರಿ, ಹಾಗೂ ನಗರದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಇಡಿ ದಿನ ನಗರದಲ್ಲಿ ಯಾವುದೆ ವ್ಯಾಪಾರ ವಹಿವಾಟಗಳು ನಡೆಯದೆ ಬಂದ್ ಯಶಸ್ವಿಯಾಗಿ ಜರುಗಿತು .

Home add -Advt

Related Articles

Back to top button