Latest

ಹೆಲಿಕಾಪ್ಟರ್ ಗಳಿಗೆ ವಿಮಾನ ಡಿಕ್ಕಿ: 3 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಕಾಠ್ಮಂಡು:

ಟೇಕ್ ಆಫ್ ಆಗುವ ವೇಳೆ ಸಣ್ಣ ವಿಮಾನವೊಂದು ರನ್ ವೇನಲ್ಲಿದ್ದ ಎರಡು ಹೆಲಿಕಾಪ್ಟರ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ.
ಲುಕ್ಲಾ ವಿಮಾನನಿಲ್ದಾಣದ ಸಮೀಪ ಅವಘಡ ಸಂಭವಿಸಿದೆ. ಈ ಪ್ರದೇಶದಲ್ಲಿ ವಿಮಾನ ಟೇಕ್ ಆಫ್ ಆಗುವುದು, ಲ್ಯಾಂಡ್ ಆಗುವುದು ತುಂಬ ಕಠಿಣ. ಇದು ಜಗತ್ತಿನ ಅತ್ಯಂತ ದುರ್ಗಮ ಮಾರ್ಗವನ್ನೊಳಗೊಂಡ ಏರ್ಪೋರ್ಟ್.
ಸಮ್ಮಿತ್ ಏರ್ಬೌಂಡ್ ಒಡೆತನದ ಲೆಟ್ -410 ವಿಮಾನ ಅಪಘಾತಕ್ಕೀಡಾಗಿದ್ದು ಅದರಲ್ಲಿದ್ದ ಕೋ ಪೈಲೆಟ್ ಮತ್ತು ಅಲ್ಲೇ ಇದ್ದ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಇನ್ನೋರ್ವ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಮಾನ ಟೇಕ್ಆಫ್ ಆಗುವ ಸಂದರ್ಭದಲ್ಲಿ ಆಯತಪ್ಪಿ ಅಲ್ಲಿಯೇ ಇದ್ದ ಹೆಲಿಪ್ಯಾಡ್ನತ್ತ ನುಗ್ಗಿ, ಅಲ್ಲಿ ನಿಂತಿದ್ದ ಎರಡು ಹೆಲಿಕಾಪ್ಟರ್ಗಳಿಗೆ ಅಪ್ಪಳಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button