Latest

ಮೋದಿ ಬಯೋಪಿಕ್ ಗೆ ಚುನಾವಣೆ ಆಯೋಗ ತಡೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಭಾರೀ ವಿವಾದ ಹುಟ್ಟುಹಾಕಿದ್ದ ನರೇಂದ್ ಮೋದಿ ಬಯೋಪಿಕ್ ಬಿಡುಗಡೆಗೆ ಚುನಾವಣೆ ಆಯೋಗ ತಡೆ ನೀಡಿದೆ. 

Home add -Advt

ದೇಶಾದ್ಯಂತ ಗುರುವಾರ ಚಿತ್ರ ಬಿಡುಗಡೆ ಸಿದ್ಧತೆ ನಡೆದಿತ್ತು. ಗುರುವಾರವೇ ರಾಷ್ಟ್ರದಲ್ಲಿ ಮೊದಲ ಹಂತದ ಚುನಾವಣೆಯೂ ನಡೆಯಲಿದೆ. 

ಮೋದಿ ಬಯೋಪಿಕ್ ಬಿಜೆಪಿಗೆ ಚುನಾವಣೆಯಲ್ಲಿ ನೆರವಾಗಲಿದೆ. ಹಾಗಾಗಿ ಬಿಡುಗಡೆಗೆ ತಡೆ ನೀಡಬೇಕೆಂದು ಸೋರ್ವೋಚ್ಛ ನ್ಯಾಯಾಲಯದ ಮೊರೆ ಹೊಗಲಾಗಿತ್ತು. ಆದರೆ ಟ್ರೇಲರ್ ನೋಡಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ಅರ್ಜಿ ತಳ್ಳಿ ಹಾಕಿತ್ತು. ಅಲ್ಲದೆ ಈ ಬಗ್ಗೆ ಚುನಾವಣೆ ಆಯೋಗವೇ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದೂ ಅಭಿಪ್ರಾಯಪಟ್ಟಿತ್ತು. 

ಇದೀಗ ಚುನಾವಣೆ ಆಯೋಗ ಚಿತ್ರ ಬಿಡುಗಡೆಗೆ ತಡೆ ನೀಡಿದ್ದು, ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೂ ಬಿಡುಗಡೆ ಮಾಡದಂತೆ ನಿರ್ಬಂಧ ಹೇರಿದೆ. 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೂ ಶೇರ್ ಮಾಡಿ)

Related Articles

Back to top button