Latest

ಅಂದರ್ ಬಾಹರ್ ಆಟ; ನಾಲ್ವರು ಅಂದರ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಯಮನಾಪುರ ವ್ಯಾಪ್ತಿಯ ಹಿಂಡಾಲ್ಕೋ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ಅಂದರ ಬಾಹರ್  ಆಟ ಆಡುತ್ತಿದ್ದಾಗ ಎಸಿಪಿ ಮಹಾಂತೇಶ್ವರ ಜಿದ್ದಿ  ನೇತೃತ್ವದಲ್ಲಿ ಸಿಸಿಬಿ ಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದೆ. 

Home add -Advt

 ಬಾಲರಾಜ ಗಂಗಪ್ಪ ಹಳಬರ ಸಾ. ಗಾಂಧಿ ನಗರ, ಬೆಳಗಾವಿ,   ಪ್ರಕಾಶ ಬಾಬು ತ್ಯಾನಗಿ ಸಾ. ಸಂಗಮ ನಗರ, ಕಂಗ್ರಾಳಿ ಬಿ.ಕೆ, ಆಕಾಶ ಪ್ರಕಾಶ ಗೋರಖನವರ ಸಾ. ದುರ್ಗಾದೇವಿ ಗಲ್ಲಿ, ಮುತ್ಯಾನಟ್ಟಿ,  ಸುರೇಶ ಮಾರುತಿ ಗಸ್ತಿ ಸಾ. ಸಂಗಮ ನಗರ, ಕಂಗ್ರಾಳಿ ಬಿ.ಕೆ ಬಂಧಿತರು.

 ಅವರಿಂದ ರೂ.೬೦ ಸಾವಿರ ಮೌಲ್ಯದ ೩ ದ್ವಿಚಕ್ರ ವಾಹನ, ೧೮,೪೫೦ ರೂ. ವಶಪಡಿಸಿಕೊಳ್ಳಲಾಗಿದೆ.

 ಲಗಮಾ ಯಲ್ಲಪ್ಪ ಕಾಟಾಬಳಿ,  ಪರಸು ಅವ್ವಣ್ಣ ಜಂಬಳವಾಡಿ,   ಮಹೇಶ ಸಿದ್ದಪ್ಪ ಪಾಟೀಲ, ಯಲ್ಲಪ್ಪ ಸಿದ್ರಾಯಿ ಪಾಟೀಲ, ರಾಜು ಕಲ್ಲಪ್ಪ ಚನ್ನಹೊಸೂರ , ಭರಮಾ ಹುಲೆಪ್ಪ ನಾಯಿಕ,   ಪರುಶರಾಮ ಬಾಬು ಕರಿಕಟ್ಟಿ  ಈ ೭ ಜನರು   ಪರಾರಿಯಾಗಿದ್ದಾರೆ.

ಪೊಲೀಸ್ ಸಿಬ್ಬಂದಿಯಾದ ಐ ಎಸ್ ಪಾಟೀಲ,  ಅನೀಲ ಪಾಟೀಲ,  ಎಸ್ ಬಿ ಪಾಟೀಲ,  ಎಚ್ ಎಸ್ ನಿಸುನ್ನವರ,  ಯಾಸಿನ ನಧಾಪ,  ಶ್ರೀಧರ ಭಜಂತ್ರಿ,   ಹಣಮಂತ ಬಾರ್ಕಿ,  ಎಸ್ ಎಸ್ ಆಜೂರ ತಂಡದಲ್ಲಿದ್ದರು. 

Related Articles

Back to top button