Kannada News

ಅಂಬರೀಶ್ ಜನ್ಮದಿನದಂದು ಟ್ವೀಟ್ ಮಾಡಿ ಟೀಕೆಗೊಳಗಾದ ಸಿದ್ದರಾಮಯ್ಯ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ದಿವಂಗತ ಅಂಬರೀಶ್ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.

Home add -Advt

“‘ಸ್ನೇಹಕ್ಕೆ ಮತ್ತೊಂದು ಹೆಸರು ಅಂಬರೀಶ್. ಜಾತಿ,ಧರ್ಮ, ಪಕ್ಷ, ಪ್ರದೇಶವನ್ನು ಮೀರಿದ ಗೆಳೆತನ ಅವರದ್ದು. ಬಡವರು, ಅಸಹಾಯಕರಿಗೆ ಸದಾ ಮಿಡಿಯುತ್ತಿದ್ದ ಉದಾರಿ ಅವರು. ಇಂದಿನ ನಿರ್ದಯಿ ರಾಜಕಾರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದ ಅಂಬರೀಶ್ ಕೊನೆಗೂ ನಮ್ಮನ್ನು ಅಗಲಿ ಹೋಗಿಬಿಟ್ಟರು. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ನನ್ನ ನೆನಪುಗಳ ನಮನಗಳು”  ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅವರು ಇದ್ದಾಗಲೂ ನೀವು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈಗ ಅವರ ಆತ್ಮಕ್ಕೆ ಶಾಂತಿ ಸಿಗುವ ರೀತಿಯಲ್ಲೂ ವರ್ತಿಸುತ್ತಿಲ್ಲ. ಅಂತದ್ದರಲ್ಲಿ ಅವರ ಬಗ್ಗೆ ಟ್ವೀಟ್ ಮಾಡಿದ್ದು ವಿಪರ್ಯಾಸ ಎಂದು ಜನರು ಕಾಲೆಳೆಯುತ್ತಿದ್ದಾರೆ.

ಅದರಲ್ಲೂ ಅಬರೀಶ್ ನಿರ್ದಯಿ ರಾಜಕಾರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದರು ಎನ್ನುವ ಹೇಳಿಕೆ ಕುರಿತು ಅನೇಕರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ನಿರ್ದಯಿ ಎನ್ನುವುದರ ಕುರಿತು ವಿವರ ನೀಡಿ, ಇದರಲ್ಲಿ ನೀವೂ ಬರುತ್ತೀರಾ ಎಂದೆಲ್ಲ ಕೇಳುತ್ತಿದ್ದಾರೆ.

 

 

 

 

Related Articles

Back to top button